ಧರ್ಮಸ್ಥಳ, ಮೇ19(Daijiworld News/SS): ಕಳೆದ ಕೆಲ ದಿನಗಳ ಹಿಂದೆ ನೀರಿನ ಕೊರತೆಯಿಂದ ಕೆಲ ದಿನಗಳ ಕಾಲ ಭಕ್ತರಿಗೆ ಪ್ರವಾಸ ಮುಂದೂಡುವಂತೆ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದರು.
ಇದೀಗ ಶ್ರೀ ಕ್ಷೇತ್ರದಲ್ಲಿ ನಿತ್ಯ ಸಾವಿರಾರು ಮಂದಿಗೆ ಮಾಡಲಾಗುವ ಅನ್ನದಾಸೋಹಕ್ಕೂ ಕೂಡ ನೀರಿನ ಬರದ ಬಿಸಿ ತಟ್ಟಿದೆ ಎಂದು ತಿಳಿದುಬಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಿತ್ಯ ಅನ್ನದಾಸೋಹಕ್ಕೆ ಪ್ರತಿ ನಿತ್ಯ 3 ಲಕ್ಷ ಲೀ. ನೀರು ಅಗತ್ಯವಿದ್ದು, ಬರದ ಹಿನ್ನೆಲೆಯಲ್ಲಿ ನೀರಿನ ಅತಿಯಾದ ಬಳಕೆಗೆ ಬ್ರೇಕ್ ಹಾಕಲಾಗಿದೆ.
ನಿತ್ಯ 30ರಿಂದ 40ಸಾವಿರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ ನಡೆಯಲಿದ್ದು, ತಯಾರಿಗೆ ಭಾರೀ ಪ್ರಮಾಣದ ಶುದ್ದ ನೀರಿನ ಅಗತ್ಯವಿದೆ. ಆದರೆ ನೀರಿನ ಅಗತ್ಯ ಪೂರೈಸಲು ಕ್ಷೇತ್ರದ ಜಲಮೂಲವಾದ ನೇತ್ರಾವತಿ ಬತ್ತಿದ್ದು, ತೀವ್ರ ಸಮಸ್ಯೆಯಾಗಿದೆ.
ಅನ್ನದಾಸೋಹಕ್ಕೆ ಸ್ಟೀಲ್ ತಟ್ಟೆಯ ಬದಲಾಗಿ ಎಲೆಗಳ ಬಳಕೆಗೆ ಆಡಳಿತ ಮಂಡಳಿ ಮುಂದಾಗಿದೆ. ಶನಿವಾರ, ಭಾನುವಾರ, ಸೋಮವಾರ ಎಲೆಯ ಬಳಕೆಗೆ ತೀರ್ಮಾನಿಸಿದೆ.