ಮೂಡಬಿದ್ರೆ,ಮೇ19(DaijiworldNews/AZM):ಮೂಡಬಿದ್ರೆಯಲ್ಲಿ ನಡೆದ ನವೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿ ಪೊಂಗು ರಮೇಶ್
ಈಗಾಗಲೇ ಆರೋಪಿಯಾಗಿರುವ ಪೊಂಗು ರಮೇಶ್ ಎಂಬಾತನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೂಡುಬಿದಿರೆಯ ಮಿಜಾರು ದೂಮಚಡವಿನ ದಡ್ಡಿ ಕ್ರಾಸ್ ನಲ್ಲಿ ಮೇ 18 ರ ಶುಕ್ರವಾರ ತಡ ರಾತ್ರಿ ಬರ್ಕೆ ನಿವಾಸಿ ನವೀನ್(29) ಎಂಬ ಯುವಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ನವೀನ್ ಅವರ ಪರಿಚಯಸ್ಥರೇ ಆದ ರಮೇಶ(35) ಹಾಗೂ ನಿತ್ಯಾನಂದ (40) ಎಂಬವರು ತಮ್ಮ ಬೈಕ್ ತಮ್ಮ ಫೋನ್ ಕರೆ ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿ, ಮಾತಿಗೆ ಮಾತು ಬೆಳೆದು ತಲೆಗೆ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ತಲೆಗೆ ಬಿದ್ದ ಬಲವಾದ ಏಟಿನ ಹಿನ್ನಲೆ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೀಗ ಮೂಡಬಿದ್ರೆ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.