ಮಂಗಳೂರು, ಮೇ 18 (Daijiworld News/SM): ದಲಿತರ ಮೇಲೆ ಆಟ್ರಸಿಟಿ ಕೇಸ್ ದಾಖಲಾಗಿದ್ದು, ಅವರ ಮನೆಯನ್ನು ಕೆಡವಿದ್ದು, ಮನೆ ಕೆಡವಿದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕಾಗಿದ್ದು ಅವರನ್ನು ಬಂಧಿಸದೆ ಪೊಲೀಸರು ಅವರಿಗೆ ಬೆಂಬಲಿಸುತ್ತಿದ್ದಾರೆ. ಪೊಲೀಸರು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ದೂರಿದ್ದಾರೆ.
ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 24ರಂದು ಗೀತಾ ಹೆಗ್ಡೆ ಎಂಬುವವರು ಕೋರ್ಟ್ನಿಂದ ಸುಳ್ಳು ಮಾಹಿತಿ ನೀಡಿ ಮನೆ ಖಾಲಿ ಮಾಡುವಂತೆ ಹೇಳಿ ಮನೆಗೆ ಬೀಗ ಹಾಕಿದ್ದು, ಮೇ 10ರಂದು ಏಕಾಏಕಿ 10 ಜನರೊಂದಿಗೆ ಬಂದು ಗೂಂಡಾಗಿರಿ ಮಾಡಿ ಪೊಲೀಸರ ಕಾವಲು ಪಡೆದು ಮನೆಯನ್ನು ಕೆಡವಿದ್ದಾರೆ. ಇವರ ಗೂಂಡಾಗಿರಿಯನ್ನು ಮೊಬೈಲ್ನಲ್ಲಿ ಸೆರೆಹಿಡಿದವರನ್ನು ಬೆದರಿಸಿ ಅವರಿಂದ ಡಿಲಿಟ್ ಮಾಡಿಸಿದ್ದಾರೆ ಎಂದು ಹೇಳಿದರು.
ಕೋರ್ಟ್ ಕೇವಲ ಮನೆ ಕಾಲಿಮಾಡಲು ಅನುಮತಿ ನೀಡಿದ್ದು, ಇವರು ಏಕಾಏಕಿ ಮನೆ ಕೆಡವಿರುವುದರಲ್ಲಿ ತಹಶೀಲ್ದಾರ್ ಹಾಗೂ ಸುರತ್ಕಲ್ ಎಸ್ಐ ಅವರು ಕೂಡ ಬೆಂಬಲ ನೀಡಿರುವುದೇ ಕಾರಣ ಎಂದು ದೂರಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದಾಗ ಅವರು ತಹಶೀಲ್ದಾರ್ ಅವರಿಗೆ ಆ ಜಾಗದ ಬಗ್ಗೆ ಮಾಹಿತಿ ನೀಡಲು ತಿಳಿಸಿದ್ದು, ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡದೇ ನೇರವಾಗಿ ಗೀತಾ ಹೆಗ್ಡೆಯವರಿಗೆ ಇದು ಸರ್ಕಾರಿ ಜಾಗ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.