ಕಡಬ, ಮೇ 18 (Daijiworld News/SM): ಕಡಬ ಪರಿಸರದಲ್ಲಿ ಶನಿವಾರ ರಾತ್ರಿ ಗುಡುಗು, ಮಿಂಚು ಮಿಶ್ರಿತ ಭಾರೀ ಮಳೆ ಸುರಿದಿದೆ. ಆ ಮೂಲಕ ಬಿಸಿಲ ಬೇಗೆಗೆ ಬೆಂದಿರುವ ಇಳೆ ತಂಪಾಗಿದೆ.
ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪದಿಂದ ಕಾದು ಕೆಂಪಾಗಿದ್ದ ಇಳೆಯನ್ನು ತಂಪೆರೆದಿದೆ. ಕಡಬ, ಹೊಸ್ಮಠ, ಬಲ್ಯ, ಕುದ್ಮಾರು, ಪಂಜ, ಕೋಡಿಂಬಾಳ, ಮರ್ಧಾಳ, ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಗುಡುಗು - ಮಿಂಚಿನ ಆರ್ಭಟದೊಂದಿಗೆ ಗಾಳಿ ಮಳೆಯಾಗಿದೆ. ಕೊಯಿಲ, ಆತೂರು ಪರಿಸರದಲ್ಲಿ ಸಾಧಾರಣ ಗುಡುಗಿನೊಂದಿಗೆ ತುಂತುರು ಮಳೆಯಾಗಿದೆ.
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನ, ಪ್ರಾಣಿ - ಪಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ.