ಮಂಗಳೂರು, ಮೇ 18 (Daijiworld News/SM): ಇತ್ತೀಚೆಗೆ ನಳಿನ್ ಕುಮಾರ್ ಕಟೀಲ್ ಮಾಡಿರುವ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ಮೂರು ಮಂದಿ ಬೆಂಕಿ ಕೊಡುವವರಿದ್ದಾರೆ. ಜಿಲ್ಲೆಗೆ ಸಂಸದ ನಳೀನ್ ಬೆಂಕಿ ಕೊಟ್ಟರೆ, ರಾಜ್ಯಕ್ಕೆ ಅನಂತ್ ಕುಮಾರ್ ಹೆಗಡೆ ಬೆಂಕಿ ಕೊಡ್ತಾರೆ. ದೇಶಕ್ಕೆ ಸಾದ್ವಿ ಬೆಂಕಿ ಕೊಡ್ತಾರೆ. ಇದು ಇದೇ ರೀತಿ ಮುಂದುವರಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ. ಬಿಜೆಪಿಗರು ಹೇಳಿಕೆಯನ್ನು ಸರ್ಮಥಿಸುತ್ತಾರಾದರೆ ಇನ್ನೂ ಹತ್ತು ದಿನದಲ್ಲಿ ಕ್ರಮ ಕೈಗೊಳ್ಳಲಿ. ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದನ್ನು ಸಮರ್ಥಿಸುವುದಾದರೆ ಜಿಲ್ಲೆಯ ಜನತೆ ಸಂಸದರನ್ನು ಮೆರವಣಿಗೆ ಮಾಡಲಿ ಎಂದು ಐವನ್ ವ್ಯಂಗ್ಯವಾಡಿದ್ದಾರೆ.
ಇಲ್ಲವಾದಲ್ಲಿ ಸಂಸದರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂಬುವುದಾಗಿ ಐವನ್ ಡಿಸೋಜ ಸವಾಲು ಹಾಕಿದ್ದಾರೆ.