ಕಾಸರಗೋಡು, ಆ 2(DaijiworldNews/ AK): ಮನೆಗೆ ನುಗ್ಗಿ ಕಳವುಗೈದ ಮರುದಿನವೇ ಆರೋಪಿ ಬಂಧನ ಕ್ಕೊಳಗಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಪಚ್ಚಂಬಳದಲ್ಲಿ ನಡೆದಿದೆ.
ಇಚ್ಲಂಗೋಡು ಪಚ್ಚಂಬಳದ ಮುರ್ಶಿದ್ (19)ಬಂಧಿತ ಆರೋಪಿ. ಬುಧವಾರ ರಾತ್ರಿ ಕೃತ್ಯ ನಡೆದಿತ್ತು. ಪಚ್ಚಂಬಳದ ಅಬ್ದುಲ್ ಮಜೀದ್ ರವರ ಮನೆಗೆ ನುಗ್ಗಿದ ಈತ 29,700 ರೂ.ಕಳವು ಗೈದಿದ್ದನು. ಎರಡು ಅಂತಸ್ತಿನ ಈ ಮನೆಯ ಟೆರೆಸ್ ನ ಬಾಗಿಲು ತೆರಳುವ ಬಾಗಿಲು ಮುರಿದು ಒಳನುಗ್ಗಿದ್ದು, ಕಪಾಟಿನಲ್ಲಿ ರಿಸಲಾಗಿದ್ದ ಹಣವನ್ನು ಕಳವುಗೈದು ಪರಾರಿ ಯಾಗಿದ್ದನು .
ಮನೆಯವರು ಕೆಳ ಅಂತಸ್ತಿನಲ್ಲಿ ಮಲಗಿದ್ದರು.ಮರುದಿನ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಕುಂಬಳೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶಂಕಿತ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ವಿಚಾರಣೆ ನಡೆಸಿದಾಗ ಮುರ್ಶಿದ್ ತಪ್ಪೊಪ್ಪಿ ಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ