ಬಂಟ್ವಾಳ, ಆ 2(DaijiworldNews/MS): ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಮತ್ತು ನೆರೆಗೆ ನೇತ್ರಾವತಿ ನದಿ ತೀರದ ತಗ್ಗು ಪ್ರದೇಶಗಳಾದ ಅಮ್ಮುಂಜೆ,ಗೂಡಿನಬಳಿ ಆಲಡ್ಕ, ಕೆಳಗಿನಪೇಟೆ, ನಾವೂರ,ಅನೇಜ ತಿರುವು, ಅಜಿಲಮೊಗರು ವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಬೇಟಿ ನೀಡಿ, ಸಂತ್ರಸ್ತರ ಸಮಸ್ಯರ ಆಲಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ದನ್, ತಹಶಿಲ್ದಾರ್ ಅರ್ಚನಾ ಭಟ್, ತಾ.ಪಂ.ಇಒ.ಸಚಿನ್ ಕುಮಾರ್ ಸಚಿವರಿಗೆ ಸಾಥ್ ನೀಡಿ ಪೂರಕ ಮಾಹಿತಿ ಒದಗಿಸಿದರು.
ಬಳಿಕ ಮಾಧ್ಯಮವರ ಜೊತೆ ಮಾತನಾಡಿದ ಸಚಿವರು, ನೆರೆಯಿಂದ ಮಳುಗಡೆಯಾದ ಆಲಡ್ಕದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆಗುತ್ತದೆ. ಸಂತ್ರಸ್ತರು ವಾಸವಾಗಿರುವ ಜಾಗದ ಮೇಲೆ ಕುಮ್ಕಿ ಜಾಗವೆಂದು ಕೇಸು ದಾಖಲಾಗಿದ್ದು,ಪ್ರಕರಣ ಜಿಲ್ಲಾಧಿಕಾರಿಯವರ ಮುಂದೆ ಇದೆ, ಆದಷ್ಟು ಬೇಗ ಜಾಗದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಜಮೀನು ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇನೆ .
ಸಮಸ್ಯೆ ಪರಿಹಾರವಾದರೆ ಮನೆ ಕಟ್ಟಲು ಸರಕಾರದ ಸಹಾಯಧನ ನೀಡಲಾಗುತ್ತದೆ. ಈ ವರ್ಷ ಸತತವಾಗಿ ಆರು ಬಾರಿ ಈ ಭಾಗಕ್ಕೆ ನೆರೆ ನೀರು ಬಂದಿದೆ ಎಂಬ ವಿಚಾರವನ್ನು ಅವರು ತಿಳಿಸಿದರು.
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆಯನ್ನು ಕಳೆದುಕೊಂಡವಂತಹ ಸಂತ್ರಸ್ತರಿಗೆ 1.25 ಲಕ್ಷ ಸಹಾಯಧನದ ಜೊತೆ ಸರಕಾರದ ಮನೆ ಕಟ್ಟುವ ಬೇರೆ ಬೇರೆ ಯೋಜನೆಗಳನ್ನು ಸೇರಿಸಿಕೊಂಡು ಸಂಪೂರ್ಣ ಮನೆಯಾಗಿರುವವರಿಗೆ ರೂ.5 ಲಕ್ಷ ಸಹಾಯಧನವನ್ನು ನೀಡುವ ಬಗ್ಗೆ ಸರಕಾರದಿಂದ ಅದೇಶ ಮಾಡಲಾಗಿದೆ.
ಬಾಗಶ: ಹಾನಿಯಾದ ಮನೆಗಳಿಗೆ 6.500 ಸಾವಿರದಿಂದ 50 ಸಾವಿರದವರೆಗೆ ಏರಿಸುವ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದರು.
ಹಿಂದಿನ ಸರಕಾರದ ಅವಧಿಯಲ್ಲಿ ಪಾಕೃತಿಕ ವಿಕೋಪದಡಿ ಸಂಪೂರ್ಣ ಮನೆ ಹಾನಿಗೆ ನೀಡುತ್ತಿದ್ದ ಸಹಾಯಧನದ ಯೋಜನೆಯಲ್ಲಿ ಅನೇಕ ನ್ಯೂನತೆಗಳಿತ್ತು, ಅದ್ದರಿಂದ ಸರಕಾರದ ಸಹಾಯಧನದ ದುರುಪಯೋಗವಾಗುವುದು ಕಂಡು ಬಂದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿದ್ದೇವೆ. ಮನೆ ಕಳೆದುಕೊಂಡವಂತಹರಿಗೆ ಪೂರ್ತಿಯಾಗಿ ಸರಕಾರದಿಂದ ಸಹಾಯಧನ ಹಾಗೂ ನಿಗಮಗಳು ನೀಡುವ ಅನುದಾನವನ್ನು ಬಳಸಿಕೊಂಡು ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವ್ಯವಸ್ಥೆ ಕಲ್ಪಿಸಿಕೊಡಿ : ಆಲಡ್ಕದ ಸಂತ್ರಸ್ತರು.
ಸಚಿವರು ಬೇಟಿ ನೀಡಿದ ಸಂದರ್ಭದಲ್ಲಿ ಆಲಡ್ಕದಲ್ಲಿ ಸಂತ್ರಸ್ತರು ಶಾಶ್ವತವಾದ ಪರಿಹಾರಕ್ಕೆ ಒತ್ತಾಯ ಮಾಡಿದರು. ಪ್ರತಿ ವರ್ಷ ನೆರೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ಆದರೆ ಈವರೆಗೆ ನಮಗೆ ಶಾಶ್ವತವಾದ ಪರಿಹಾರ ಸಿಕ್ಕಿಲ್ಲ. ಬೇರೆ ಜಾಗ ಗುರುತಿಸಿ,ಮನೆ ನಿರ್ಮಿಸಿಕೊಡುವಂತೆ ಇಲ್ಲಿನ ಸಂತ್ರಸ್ತ ಕುಟುಂಬಗಳು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಕಾರ್ಪೋರೆಟರ್ ವಿನಯರಾಜ್ , ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ , ಪ್ರಮುಖರಾದ ಸುದರ್ಶನ್ ಜೈನ್ ಪಂಜಿಕಲ್ಲು, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಆನಂತಪದ್ಮನಾಭ, ಶಿವಕುಮಾರ್, ಕಂದಾಯ ನಿರೀಕ್ಷಕರುಗಳಾದ ವಿಜಯ್,ಜನಾರ್ದನ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು