ಬೈಂದೂರು , ಆ.1(DaijiworldNews/AK): ಕಳೆದ 3-4 ದಿನಗಳಿಂದ ಬೈಂದೂರುನಲ್ಲಿ ಎಡೆ ಬಿಡದೇ ಮಳೆಯಾಗುತ್ತಿದ್ದು, ಕೊಲ್ಲೂರು ಘಾಟಿ ಪ್ರದೇಶದಲ್ಲೂ ನಿರಂತರ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ,ಭಾಗದಲ್ಲಿ ನೆರೆ ನೀರು ಇಳಿಯದೇ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಂಪರ್ಕ ರಸ್ತೆ ಮುಳುಗಡೆಯಾಗುವ ಕಾರಣ ಮನೆಯ ಅಗತ್ಯದ ಸಣ್ಣ ಸಣ್ಣ ವಸ್ತುಗಳನ್ನು ತರಲು ಹಾಗೂ ಮುಖ್ಯ ರಸ್ತೆಯ ಸಂಪರ್ಕಕ್ಕೂ ನಾವುಂದಕ್ಕೆ ಬರಬೇಕಾದ ಇವರು, ಕಿ.ಮೀ ದೂರವನ್ನು ನೀರಿನ ನಡುವೆ ದೋಣಿಯೇ ಆಸರೆಯಾಗಿದೆ.ಅಧಿಕಾರಿಗಳ ಗಮನ ಸೆಳೆಯಲು ಡ್ರೋನ್ ಮುಖಾಂತರ ನೆರೆಯ ದೃಶ್ಯವನ್ನು ಸೆರೆಹಿಡಿಯಲಾಯಿತು
ಮೊನ್ನೆ ಎಷ್ಟೇ ನೆರೆ ಇಳಿಮುಖ ಕಂಡಿದೆ ಮತ್ತೆ ಗಾಳಿ ಮಳೆಗೆ ಅಕ್ಷರಸಹ ರಾತ್ರೋರಾತ್ರಿ ಮನೆ ಬಾಗಿಲಿಗೆ ನೀರ್ ನುಗ್ಗಿದೆ ಅವಾಂತರಗಳನ್ನು ಉಂಟು ಮಾಡಿದೆ ನೆರೆ ಬಂದರೆ ಈ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿನ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಹೆಚ್ಚುಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು.
ಓಟು ಕೇಳಲು ಬರುವ ಜನಪ್ರತಿನಿಧಿಗಳು ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋದವರು ಹೋದವರು ಮತ್ತೆ ಈ ಕಡೆ ತಲೆಯನ್ನು ಹಾಕೋದಿಲ್ಲ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.