ಪುತ್ತೂರು,ಮೇ18(DaijiworldNews/AZM):"ತನಗೆ ರಜಾಸಮಯದಲ್ಲಿ ಎಲ್ಲೂ ತಿರುಗಾಡಲು ಕರೆದುಕೊಂಡು ಹೋಗದ ಹಿನ್ನಲೆ ತಾನು ಧರ್ಮಸ್ಥಳ ನೋಡಲು ಬಂದಿದ್ದೇನೆ" ಕಾಣೆಯಾಗಿದ್ದ ಬಾಲಕನೊಬ್ಬ ಕೈಕಂಬದ ಪೊಲೀಸರಿಗೆ ಹೇಳಿದ ಮಾತಿದು.
ಕೆಂಜಾಳದಲ್ಲಿರುವ ಹೋಟೆಲ್ ಮಾಲೀಕರೊಬ್ಬರು ಬಾಲಕನೊಬ್ಬ ತಿರುಗಾಡುತ್ತಿದ್ದ ಕುರಿತು ಕೈಕಂಬ ಪೊಲೀಸರಿಗೆ ದೂರು ನೀಡಿದ ಹಿನ್ನಲೆ, ಬಾಲಕನಲ್ಲಿ ಪೊಲೀಸರು ವಿಚಾರಿಸಿದಾಗ, ತಂದೆ ತಾಯಿಯೊಂದಿಗೆ ಸುಬ್ರಮಣ್ಶ ಬಂದಿದ್ದು ತನಗೆ ಅಜ್ಬಿ ಮನೆಗೆ ಹೋಗಲು ತಿಳಿಸಿ ಪೋಷಕರು ಊರಿಗೆ ಹೋಗಿದ್ದಾಗಿ ತಿಳಿಸಿದ್ದಾನೆ. ಬಾಲಕನಲ್ಲಿ ಮಾಹಿತಿ ಕಲೆ ಹಾಕಿಕೊಂಡ ಪೊಲೀಸರು ಪೋಷಕರನ್ನು ಸಂಪರ್ಕಿಸಿ ಬಾಲಕನ ಕುರಿತು ವಿಚಾರಿಸಿದಾಗ ಅಶ್ವಿತ್(11)ರ ಬಾಲಕ ನಾಪತ್ತೆಯಾಗಿರುವ ಕುರಿತು ನಾವು ದೂರು ನೀಡಿದ್ದು, ಪ್ರತೀ ದಿನ ಹುಡುಕಾಡುತ್ತಿದ್ದೆವು. ಹಾಗೂ ಎಲ್ಲಾ ಕಡೆಗಳ ಸಿಸಿ ಕ್ಯಾಮರಾವನ್ನು ಚೆಕ್ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಬಾಲಕನ ಪೋಷಕರನ್ನು ಕರೆಸಿ ಆತನನ್ನು ಪೋಷಕರೊಂದಿಗೆ ಕಳುಹಿಸಿಕೊಟ್ಟರು. ಈ ನಡುವೆ ಪೊಲೀಸರು ಯಾಕ್ಕಾಗಿ ಮನೆಬಿಟ್ಟು ಬಂದಿಯಾ ಎಂದು ಪ್ರಶ್ನಿಸಿದಾಗ "ತನಗೆ ರಜಾಸಮಯದಲ್ಲಿ ಎಲ್ಲೂ ತಿರುಗಾಡಲು ಕರೆದುಕೊಂಡು ಹೋಗದ ಹಿನ್ನಲೆ ತಾನು ಧರ್ಮಸ್ಥಳ ನೋಡಲು ಬಂದಿದ್ದೇನೆ ಎಂದು ಹೇಳಿದ್ದಾನೆ.