ಕಾರ್ಕಳ, ಆ 01 : (DaijiworldNews/ AK):ಹಿಂದೆಂದಿಗೂ ಕಂಡು ಅರಿಯದ ರೀತಿಯಲ್ಲಿ ಸುರಿದ ಕುಂಭದ್ರೋಣ ಮಳೆಗೆ ಐತಿಹಾಸಿಕ ಧಾರ್ಮಿಕ ಹಿನ್ನಲೆಯುಳ್ಳ ಸಾಣೂರು ಅಸ್ಟೈಯದ್ ಶಾಹುಲ್ ಹಮೀದ್ ವಲಿಯುಲ್ಲಾಹಿ(ಖ.) ದರ್ಗಾ ಶರೀಫ್ ಜಲವೃತಗೊಂಡಿದ್ದು, ಆನೆಕೆರೆ-ಸಿಗಡಿಕೆರೆ ಸಂಗಮವಾಗಿದೆ.
ಎಣ್ಣಿಹೊಳೆಯಲ್ಲಿ ಹಲವು ಅಂಗಡಿ ಮನೆಗಳು ಜಲವೃತಗೊಂಡಿವೆ.ಬುಧವಾರ ಸಂಜೆಯ ಬಳಿಕ ರಾತ್ರಿ ಇಡೀ ಸುರಿದ ಕುಂಭದ್ರೋಣ ಮಳೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಬಹುತೇಕ ತಗ್ಗು ಪ್ರದೇಶ ಮಾತ್ರವಲ್ಲದೇ ಉಳಿದ ಏರುಪ್ರದೇಶಗಳಲ್ಲೂ ಏಕಾಏಕಿಯಾಗಿ ನೆರೆ ಕಾಣಿಸಿಕೊಂಡಿರುವುದು ನಾಗರಿಕರ ಆತಂಕಕ್ಕೂ ಕಾರಣವಾಗಿತ್ತು.
ಸ್ವರ್ಣ, ಶಾಂಭವಿ, ಸೀತಾನದಿ ಪರಿಸರದಲ್ಲಿ ಒಮ್ಮಿದೊಮ್ಮೆಲೆ ನೀರಿನ ಮಟ್ಟ ಹಾಗೂ ಒಳಹರಿವು ಹೆಚ್ಚುದ್ದವು.ಈದು ಮಸೀದಿ ಹಾಗೂ ಸಾಣೂರು ದರ್ಗದ ಪರಿಸರವು ಜಲವ್ರತಗೊಂಡು ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ಅಲ್ಲಿನ ನಿವಾಸಿಗಳನ್ನು ಸ್ಥಳೀಯ ಧಾರ್ಮಿಕ ಸಂಘಟಕರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ರಾತ್ರೋರಾತ್ರಿ ಸ್ಥಳಾಂತರಿಸುವುದಕ್ಕೆ ನೆರವಾದರು.
ಕಾರ್ಕಳವನ್ನು ಆಳ್ವಿಕೆ ಮಾಡಿದ ಕಾಲಘಟ್ಟದಲ್ಲಿ ಆನೆಕೆರೆ ಹಾಗೂ ಸಿಗಡಿಕೆರೆ ಗೆ ತನ್ನದೇ ಆದ ಐತಿಹ್ಯವಿದೆ.ಕಾರ್ಕಳ ಕೋಟೆಯ ಸುತ್ತಲು ಭಾರೀ ಗಾತ್ರದ ಕದಂಕ ಇದ್ದು, ಅದು ಆನೆಕೆರೆ ಸಂರ್ಪಕಿಸುತ್ತಿತ್ತು.ಆನೆಕೆರೆಯಲ್ಲಿ ಆನೆಗಳಿಗೆ ಈಜಾಡಲು ಹಾಗೂ ಸ್ನಾನ ಮಾಡುವುದಕ್ಕೂ ಅವಕಾಶಗಳಿತ್ತು.ಹೀಗಾಗಿ ಆ ಕೆರೆಗೆ ಆನೆಕೆರೆ ಎಂಬುವುದಾಗಿ ಕರೆಯಲ್ಪಡಲಾಗಿತ್ತು ಎಂಬುವುದು ಐತಿಹಾಸವಾಗಿದೆ.
ಆನೆಕೆರೆ ಹಾಗೂ ಸಿಗಡಿಕೆರೆ ಹಲವು ವರ್ಷಗಳ ಹಿಂದೆ ಒಂದಕ್ಕೊಂದು ಸಂಪರ್ಕವೇ ಇತ್ತು. ನಡುವಿನಲ್ಲಿ ಮಣ್ಷು ಹಾಕಿ ಹಿರಿಯಂಗಡಿ ಹಾಗೂ ದಾನಸಾಲೆಗೆ ಸಂಪರ್ಕ ಕಲ್ಪಿಸಲಾಗುತ್ತು ಮುಂದು ಅಭಿವೃದ್ಧಿಯ ನಿಟ್ಟಿನಲ್ಲಿ ಡಾಂಬರು ರಸ್ತೆ ನಿರ್ಮಾಣಗೊಂಡಿತು.
ಹಲ ವರ್ಷಗಳ ಹಿಂದೆ ಸಿಗಡಿ ಕರೆಯನ್ನು ಮುಚ್ಚಿ ಕಾರ್ಕಳ ಬಸ್ಸು ನಿಲ್ದಾಣ ಮಾಡುವ ಯೋಜನೆ ಸರಕಾರದ ಮುಂದೆ ಇತ್ತು. ಅದನ್ನು ವಿರೋಧಿಸಿ ಭಾರೀ ಹೋರಾಟವು ನಡೆದಿದ್ದು, ಹೋರಾಟದಲ್ಲಿ ಕೋಟಾ ಶಿವರಾಮ ಕಾರಂತ ಹಾಗೂ ಪರಿಸರವಾದಿಗಳು ಪಾಲ್ಗೊಂಡರು. ಹೋರಾಟ ತೀವ್ರ ಗೊಳ್ಳುತ್ತಿದ್ದಂತೆ ಸಿಗಡಿಕೆರೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ ಕಾರ್ಕಳ ಬಸ್ ನಿಲ್ದಾಣದ ಯೋಜನೆಯನ್ನು ಕೈ ಬಿಡಲಾಯಿತು.
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಸರಕಾರದ ಅನುದಾನ, ಸಾರ್ವಜನಿಕ ಸಂಘ- ಸಂಸ್ಥೆ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ಹೂಳು ಎತ್ತಿ ಅಭಿವೃದ್ಧಿ ಕಾರ್ಯವು ನಡೆದಿತ್ತು.
ಈ ನಡುವೆ ಆನೆಕೆರೆ ಹಾಗೂ ಸಿಗಡಿಕೆರೆಯ ಒಂದು ತಲಾ ಒಂದರಂತೆ ಎರಡು ಬೃಹತ್ ಬಾವಿಗಳನ್ನು ನಿರ್ಮಿಸಿ, ಆ ಮೂಲಕ ಕಾರ್ಕಳದ ಕೆಲ ಭಾಗಗಳಿಗೆ ಕಾರ್ಕಳ ಪುರಸಭೆ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ವರ್ಷ ಪೂರ್ತಿ ನೀರಿನ ಸಮೃದ್ಧಿಯಿಂದ ಕೂಡಿದ ಆನೆಕೆರೆ ಹಾಗೂ ಸಿಗಡಿ ಕೆರೆಯಿಂದಾಗಿ ಅಂತರ್ ಜಲಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದು ಪರಿಸರದ ಹಲವು ಕಿ.ಮೀ ಸುತ್ತಳತೆಗಳ ಬಾವಿಗಳಲ್ಲಿ ನೀರು ಬತ್ತದೇ ಇರಲು ಕಾರಣವೂ ಆಗಿದೆ.
ಆನೆಕೆರೆ ಹಾಗೂ ಸಿಗಡಿಕೆರೆಯ ಹೆಚ್ಚುವರಿ ನೀರು ಮಳೆಗಾಲದಲ್ಲಿ ಹರಿದು ಮುಂದೆ ಕಾಬೆಟ್ಟು, ಪರಪ್ಪು ಮೂಲಕ ಮುಂದೆ ಉದ್ಯಾವರ ಹೊಳೆಗೆ ಲೀನವಾಗುತ್ತಿದೆ.
ಕುಂಭದ್ರೋಣ ಮಳೆಯಿಂದಾಗ ಎರಡು ಕೆರೆಗಳ ನಡುವೆ ಹಾದೂ ಹೋಗಿರುವ ರಸ್ತೆಯು ಜಲವೃತಗೊಂಡಿರುವುದು ಕಾರ್ಕಳ ಮಂದಿಗೆ ಹೊಸದಿಸೆಯನ್ನು ಉಂಟು ಮಾಡಿದೆ.