ಉಳ್ಳಾಲ, ಆ 01 : (DaijiworldNews/ AK):ವಿದ್ಯಾರ್ಥಿಗಳನ್ನು ದುಷ್ಠವ್ಯಸನಗಳತ್ತ ಸೆಳೆಯಲು ಮಾಫಿಯಾಗಳೇ ಇದ್ದು, ಹುಷಾರಾಗಿರಿ. ರಸ್ತೆಯುದ್ದಕ್ಕೂ ಮಾಫಿಯಾ ಕಾರ್ಯಾಚರಿಸುತ್ತದೆ. ಅವೆಲ್ಲದರ ಬೆನ್ನಿಗೆ ಬೀಳದಂತೆ ನೋಡಿ ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಂಸ್ಥೆ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನ ಗಳ ಜೊತೆ ಆಧುನಿಕ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿರುವುದನ್ನು ವಿನಿಯೋಗಿಸಿ ಎಂದು ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ.ಯ ಉಪಕುಲಾಧಿಪತಿ ಡಾ. ಎಂ.ಶಾಂತಾರಾಮ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ.ಯ ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಗಳ 2024-25 ನೇ ಬ್ಯಾಚ್ ನ ಓರಿಯೆಂಟೇಷನ್ ಕಾರ್ಯಕ್ರಮಕ್ಕೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಚಾಲನೆ ನೀಡಿ ಮಾತನಾಡಿದರು.
27 ವರ್ಷಗಳನ್ನು ನಿಟ್ಟೆ ಫಿಸಿಯೋಥೆರಪಿ ಸಂಸ್ಥೆ ಪೂರೈಸಿದ್ದು, ಉತ್ತಮ ಕಾಲೇಜಾಗಿ ಹೊರಹೊಮ್ಮಿದೆ. ಉತ್ತಮ ಸಂಸ್ಥೆಯ ಜೊತೆಗೆ ಅವಕಾಶಗಳ ಕ್ಷೇತ್ರವನ್ನು ಆರಿಸಿರುವಿರಿ. ವೃತ್ತಿಪರತೆಯೂ ಹೆಚ್ಚಿರುವ ಕ್ಷೇತ್ರದಲ್ಲಿ, ನಿಟ್ಟೆ ಫೀಯೋಥೆರಪಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ. ದೇಶದ 1142 ವಿ.ವಿಗಳ ಪೈಕಿ 65 ನೇ ಸ್ಥಾನವನ್ನು ನಿಟ್ಟೆ ವಿ.ವಿ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ. ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು ಜೊತೆಯಾಗಿ ಇರುವುದರಿಂದ ಫಿಸಿಯೋಥೆರಪಿ ಗಳಿಗೆ ಅನುಭವ ಗಳಿಸಲು ಬಹಳಷ್ಟು ಅವಕಾಶಗಳಿವೆ. ಆರೋಗ್ಯ ವಿಜ್ಞಾನಗಳ ಬೆಂಬಲದಿಂದ ರೋಗಿಯೊಬ್ಬನನ್ನು ಸಂಪೂರ್ಣವಾಗಿ ಗುಣಮುಖರನ್ನಾಗಿಸುವ ವಿಧಾನ ಫಿಸಿಯೋಥೆರಪಿಯಾಗಿದೆ ಎಂದರು.
ವಿಂಬಲ್ಡನ್ ಟೂರ್ನಮೆಂಟ್ ಆಟಗಾರರು ಫಿಸಿಯೋಥೆರಪಿಯಿಂದ ಗುಣಮುಖರಾಗಿ ಫೈನಲ್ಸ್ ಆಟವನ್ನಾಡಿದ ಉದಾಹರಣೆಗಳಿವೆ. ವಿಶ್ವ ಕಪ್ ನಲ್ಲಿ ಚಾಂಪಿಯನ್ ವಿಕೆಟ್ ಕೀಪರ್ ಆಗಿ ಹೊರಹೊಮ್ಮಲು ಫಿಸಿಯೋಥೆರಪಿ ಕಾರಣವಾಗಿದೆ. ವೈದ್ಯಕೀಯ ವಿಭಾಗ ತಂಡದ ಕೆಲಸ ಪ್ರತಿಯೊಬ್ಬನೂ ಮುಖ್ಯವಾಗಿರುತ್ತಾನೆ. ಛಾಲೆಂಜ್ ತಗೆದುಕೊಂಡಿದ್ದೀರಿ ಹೆತ್ತೆವರ ಶ್ರಮಕ್ಕೆ ಬೆಲೆ ನೀಡಿ ಜೀವನವನ್ನು ಯಶಸ್ವಿಗೊಳಿಸಿ. ವಿದ್ಯಾರ್ಥಿಗಳ ದಾರಿತಪ್ಪಿಸಲೆಂದೇ ಮಾಫಿಯಾ ಇದ್ದು, ರಸ್ತೆಯುದ್ದಕ್ಕೂ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುತ್ತಾರೆ. ಜಾಗ್ರತೆಯಿಂದ ಬಾಳಿ. ಡ್ರಗ್, ಅಲ್ಕೊಹಾಲ್, ಸೆಕ್ಸ್ ವಿಚಾರದಲ್ಲಿ ಜಾಗ್ರತೆ ವಹಿಸಿಕೊಳ್ಳಿರಿ ಎಂದರು.
ಕುಲಸಚಿವ ಡಾ.ಹರ್ಷ ಎನ್ ಹಾಲಹಳ್ಳಿ ಮಾತನಾಡಿ, ಹೊಸ ಬರುವ ವಿದ್ಯಾರ್ಥಿಗಳೆಂದರೆ ಸಂಸ್ಥೆ ಗೆ ವಸಂತ ಕಾಲ. ಸಣ್ಣ ಸಮಸ್ಯೆಗಳಾದರೂ ಸಂಸ್ಥೆ ಗಮನಕ್ಕೆ ತನ್ನಿ. ದೊಡ್ಡ ವಿಚಾರವಾಗಲೂ ಬಿಡದಿರಿ. ಸಂಸ್ಥೆ ಸದಾ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುತ್ತದೆ. ಮಾನವೀಯತೆಗೆ ಬೆಲೆ, ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಮನೋಭಾವದ ಜೊತೆಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಿರಿ ಎಂದರು.
ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಧಾಣೇಶ್ ಕುಮಾರ್ ಸ್ವಾಗತಿಸಿದರು. ಐಶ್ವರ್ಯ ನಾಯರ್ ನಿರೂಪಿಸಿದರು.ಬ್ಯಾಚ್ ಕಾರ್ಡಿನೇಟರ್ ನಿಷಿತಾ ಎಲ್ಸೀ ಫೆರ್ನಾಂಡಿಸ್ ವಂದಿಸಿದರು.