ಉಡುಪಿ, .31(DaijiworldNews/Ak):ಇತ್ತಿಚಿನ ದಿನಗಳಲ್ಲಿ ರೈಲ್ವೇ ಕ್ಷೇತ್ರದಲ್ಲಿ ಹಲವು ಆಧುನೀಕರಣ ಯೋಜನೆಗಳನ್ನು ಪರಿಚಯಿಸಿದರೂ ಆದರೆ 31 ವರ್ಷಗಳ ಐತಿಹಾಸಿಕ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ಮಾತ್ರ ಹಳೆಯ ಸ್ಥಿತಿಯಲ್ಲೇ ಉಳಿದಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ವತ್ಛತೆ, ಸುರಕ್ಷತೆ ಮತ್ತು ಪ್ಲಾಟ್ಫಾರ್ಮ್ಗಳ ವ್ಯವಸ್ಥೆಯಲ್ಲಿ ನಿಲ್ದಾಣವು ಹಿಂದೆ ಬಿದ್ದಿದೆ.
ಕಳೆದ ಹತ್ತು ವರ್ಷಗಳಲ್ಲಿ ದೇಶದ ರೈಲ್ವೇ ವಲಯದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲು ನಿಲ್ದಾಣಗಳ ಆಧುನೀಕರಣ, ಹೊಸ ಮಾದರಿಯ ವೇಗದ ರೈಲುಗಳ ಆರಂಭ, ಸಮಯ ಪಾಲನೆ, ಸ್ವಚ್ಛತೆ ಮೊದಲಾದ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಆದರೆ, ಕೃಷ್ಣ ನಗರಿ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣ ಮಾತ್ರ ಈ ಬದಲಾವಣೆಗಳ ಹೊರಗಿದ್ದು, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಉಡುಪಿ ರೈಲು ನಿಲ್ದಾಣವು ಕೊಂಕಣ ರೈಲ್ವೇ ನಿಗಮದ ಅಡಿಯಲ್ಲಿ ಬರುವ ಪ್ರಮುಖ ನಿಲ್ದಾಣವಾಗಿದ್ದು, 31 ವರ್ಷಗಳ ಇತಿಹಾಸವಿದೆ. ಕೃಷ್ಣ ಮಠ ಸೇರಿದಂತೆ ಕರಾವಳಿಯ ಹಲವಾರು ದೇಗುಲಗಳಿಗೆ ಬರುವ ಪ್ರವಾಸಿಗರು ಈ ನಿಲ್ದಾಣವನ್ನು ಬಳಸುತ್ತಾರೆ. ಉಡುಪಿ ಮತ್ತು ಮಣಿಪಾಲದ ಶೈಕ್ಷಣಿಕ ಮತ್ತು ಧಾರ್ಮಿಕ ಕೇಂದ್ರಗಳಿಗೆ ದೇಶಾದ್ಯಂತದಿಂದ ಆಗಮಿಸುವ ಜನರು ಈ ನಿಲ್ದಾಣವನ್ನು ಅವಲಂಬಿಸುತ್ತಾರೆ.
ಉಡುಪಿ ಭಾಗದ ಅನೇಕರಿಗೆ ಮುಂಬಯಿಯ ಜತೆಗೆ ಸಂಪರ್ಕವು ಪ್ರಬಲವಾಗಿದ್ದು, ಉದ್ಯಮ ಮತ್ತು ವ್ಯವಹಾರಕ್ಕಾಗಿ ಮುಂಬಯಿಯಲ್ಲಿ ನೆಲಸಿರುವ ಸಾವಿರಾರು ಮಂದಿ ಈ ನಿಲ್ದಾಣವನ್ನು ಬಳಸುತ್ತಾರೆ. ಜಾರ್ಜ್ ಫೆರ್ನಾಂಡಿಸ್ ಅವರ ಪ್ರಯತ್ನದ ಫಲವಾಗಿ ಮಂಗಳೂರಿನಿಂದ ಮುಂಬಯಿಗೆ ಕೊಂಕಣ ರೈಲು ಆರಂಭವಾಗಿತ್ತು. ಈ ಮಾರ್ಗದಲ್ಲಿ ಮೊದಲ ರೈಲು ಓಡಿದ್ದೇ ಮಂಗಳೂರು ಮತ್ತು ಉಡುಪಿ ಮಧ್ಯೆ. ಅದೂ ಇದೇ ಇಂದ್ರಾಳಿ ನಿಲ್ದಾಣದಿಂದ. ಇಷ್ಟು ದೊಡ್ಡ ಹಿನ್ನೆಲೆ ಇರುವ ಇಂದ್ರಾಳಿ ರೈಲ್ವೇ ಸ್ಟೇಷನ್ ಕಾಲಕ್ಕೆ ತಕ್ಕಂತೆ ಬದಲಾಗದೆ ಹಿಂದೆ ಬಿದ್ದಿದೆ.
ಒಂದು ದಿನದಲ್ಲಿ ಕನಿಷ್ಠ 5,000ಕ್ಕೂ ಅಧಿಕ ಪ್ರಯಾಣಿಕರು ಹತ್ತಿಳಿಯುವ ಈ ನಿಲ್ದಾಣದ ಮೂಲ ಸೌಕರ್ಯ ವ್ಯವಸ್ಥೆಯನ್ನು ಗಮನಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಸ್ವಚ್ಚತೆ ಇಲ್ಲದಿರುವುದು, ಮಳೆಗೆ ಮೇಲಚ್ವಣಿ ಶಿಟುಗಳು ಸೋರುತಿದ್ದು ಸರಿಯಾದ ರಕ್ಷಣೆ ಇಲ್ಲ, ಪ್ಲ್ರಾಟ್ ಫಾರ್ಮ್ ಬದಲಿಸಲು ಸರಿಯಾದ ಸೌಕರ್ಯವಿಲ್ಲ, ರಕ್ಷಣೆಯ ಸುಳಿವಿಲ್ಲ.
ಇಂದ್ರಾಳಿ ರೈಲು ನಿಲ್ದಾಣದ ಮೂಲಕ ದಿನಕ್ಕೆ 75 ಪ್ರಯಾಣಿಕ ರೈಲುಗಳು ಓಡಾಡುತ್ತವೆ. ಗೂಡ್ಸ್ ರೈಲು ಪ್ರತ್ಯೇಕ. ಒಂದೊಂದು ರೈಲಿನಲ್ಲಿ 75 ಜನ ಹತ್ತಿಳಿಯುತ್ತಾರೆ ಎಂಬ ಲೆಕ್ಕ ಹಿಡಿದರೂ ಕನಿಷ್ಠ ದಿನಕ್ಕೆ 5,000 ಜನ ಓಡಾಡುತ್ತಾರೆ.ಕರಾವಳಿ ಹಾಗೂ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇಯ ಮಹತ್ವದ ನಿಲ್ದಾಣವಿದು. ರತ್ನಗಿರಿ ಮತ್ತು ಮಡಗಾಂವ್ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ವಾಣಿಜ್ಯ ವಹಿವಾಟು ಇರುವ ನಿಲ್ದಾಣ.ಉಡುಪಿ, ಮಣಿಪಾಲದಂಥ ಧಾರ್ಮಿಕ, ಶೈಕ್ಷಣಿಕ ಕೇಂದ್ರಕ್ಕೆ ದೇಶಾದ್ಯಂತದಿಂದ ಜನರು, ವಿದ್ಯಾರ್ಥಿಗಳ ಸಂಪರ್ಕ ಕೂಡ ಆಗಿದೆ.
ಇಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ, ಪ್ಲಾಟ್ಫಾರ್ಮ್ಗಳ ನಡುವೆ ಸಂಪರ್ಕಕ್ಕಾಗಿ ಸೂಕ್ತ ವ್ಯವಸ್ಥೆಗಳಿಲ್ಲ, ಪ್ಲ್ರಾಟ್ ಫಾರಂನ ಹಲವು ಕಡೆ ಶೆಲ್ಟರ್ಗಳೇ ಇಲ್ಲ.ಇರುವ ಕೆಲವು ಶೆಲ್ಟರ್ಗಳು ತೂತು ಬಿದ್ದು. ಶಿಟುಗಳು ಸೋರುತಿವೆ, ರೈಲು ಹತ್ತಲು ಹೋಗುವಾಗ, ರೈಲು ಇಳಿಯುವಾಗ ಮಳೆ ಬಂದರೆ ನೆನೆಯಬೇಕು ಒಂದು ಪ್ಲ್ರಾಟ್ ಫಾರಂನಿಂದ ಇನ್ನೊಂದಕ್ಕೆ ಹೋಗಲು ವ್ಯವಸ್ಥೆಗಳು ಸೂಕ್ತವಾಗಿಲ್ಲ. ಸುರಕ್ಷತೆ ವಿಚಾರದಲ್ಲಿ ರೈಲು ನಿಲ್ದಾಣ ತುಂಬಾ ಹಿಂದೆ ಬಿದ್ದಿದೆ. ಶೌಚಾಲಯಗಳು ಹೆಚ್ಚಿಲ್ಲ, ಇರುವುದು ಕೂಡಾ ಸ್ವತ್ಛವಿಲ್ಲ ರೈಲು ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲ. ಪ್ರಸ್ತುತ, ನಿಲ್ದಾಣದ ಅನೇಕ ಮೂಲ ಸೌಕರ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಇಲ್ಲಿ ಪ್ರಯಣಿಸುವ ಪ್ರಯಣಿಕರು ಬಹಳ ಸಮಸ್ಯೆ ಎದುರಿಸುತ್ತಿದ್ದು, ರೈಲ್ವೇ ಇಲಾಖೆ ಇದರ ಭಗ್ಗೆ ತಕ್ಷಣ ಸೂಕ್ತ ಕ್ರಮಗೊಳಿಸಬೇಕೆಂದು ಎಲ್ಲಾರ ಆಶಯ.