ಉಡುಪಿ, ಜು.30(DaijiworldNews/AK):ಪ್ರಧಾನಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರನಾಗಿದ್ದು, ಸಮಯಸಾಧಕ ರಾಜಕಾರಣಿಯಾಗಿದ್ದಾರೆ. ದೇಶ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ ಅವರಾಗಿದ್ದು, ಅತಿಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಈ ಬಾರಿಯ ಬಜೆಟ್ನಲ್ಲಿ ರಾಜ್ಯಕ್ಕೆ ಷೇರು ನೀಡದೆ ಅನ್ಯಾಯ ಮತ್ತು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಿಜೆಪಿ ಸಂಸದರು, ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾದವರು ಬಜೆಟ್ ಅನ್ಯಾದ ಕುರಿತು ಮಾತನಾಡುತ್ತಿಲ್ಲ. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಅನ್ಯಾಯ ಮಾಡಿದ್ದಾರೆ ಎಂದರು.
ಹಗಲಿರುಳು ಪ್ರಧಾನಿ ಮೋದಿ ಅವರು ರಾಮನ ಜಪ ಮಾಡುತ್ತಾರೆ. ಆದರೆ, ಅವರು ರಾಮಾಯಣವನ್ನೇ ಓದಿಲ್ಲ. "ಸರ್ವೇ ಜನಾ@ ಸುಖಿನೋ ಭವಂತು' ಎನ್ನುವುದು ಶ್ರೀರಾಮನ ಘೋಷಣೆಯಾಗಿದೆ. ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ರಾಜ, ಮಂತ್ರಿ, ದೇಶ ಹೇಗಿರಬೇಕೆಂಬ ಉಲ್ಲೇಖವಿದೆ. ಚುನಾವಣಾ ಸಂದರ್ಭದಲ್ಲಿ ಧರ್ಮ, ಜಾತಿ, ಭಾಷೆ ಹಾಗೂ ದೇವರ ಹೆಸರಲ್ಲಿ ಮಾತನಾಡಬಾರದು ಎಂಬ ಕಾನೂನು ಇದೆ. ಆದರೆ, ಜನರ ಸೂಕ್ಷ$್ಮ ಭಾವನೆಗಳನ್ನು ಕೆರಳಿಸಿ ರಾಮನ ಹೆಸರಲ್ಲಿ ಇವರು ದೇಶ ಒಡೆಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ಮಳೆಯಲ್ಲಿ ಸೋರುತ್ತಿದೆ ಎಂದು ಟೀಕಿಸಿದರು.
ಕಳೆದ ಎಂಪಿ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ನಿರೀೆ ಮಾಡಿತ್ತು. ಆದರೆ, 9 ಸ್ಥಾನ ಗೆದ್ದಿದೆ. ಹೆಚ್ಚು ಮತ ಪಡೆದಿದ್ದರೂ ನಿರೀಸದಷ್ಟು ಸ್ಥಾನ ಗೆಲ್ಲದೆ ಕಾಂಗ್ರೆಸ್ಗೆ ಸೋಲಾಗಿದೆ. ಅದಕ್ಕೆ ಕಾರಣವೇನು ಎಂದು ತಿಳಿಯಲು ಸೋಲನುಭವಿಸಿದ ಜಿಲ್ಲೆಗಳಲ್ಲಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸುತಿದ್ದೇನೆ. ದೇಶ ಮತ್ತು ರಾಜಕಾರಣ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಯಾವುದೇ ಸಂದರ್ಭದಲ್ಲಿ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ಆಗಬಹುದು. ಹೀಗಾಗಿ 2ನೇ ಸಾಲಿನ ನಾಯಕರನ್ನು ಬೆಳೆಸಲು ಈ ಚುನಾವಣೆ ಮಹತ್ವದ್ದಾಗಿದ್ದು, ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪಕ್ಷ ಸಂಟನೆಗಾಗಿ ಸಲಹೆ, ಸೂಚನೆ ಸಂಗ್ರಹಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಸಯೀದ್ ಅಹ್ಮದ್, ಅಜಯಕುಮಾರ್ ಸರನಾಯಕ್, ಎಂಎ. ಗೂರ್, ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಸಾದರಾಜ್ ಕಾಂಚನ್, ಕೆ.ವಿಕಾಸ್ ಹೆಗ್ಡೆ ಇದ್ದರು.