ಬಂಟ್ವಾಳ, ಜು.30(DaijiworldNews/AA): ಘಟ್ಟ ಪತ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ಬೆಳಗ್ಗೆ 7.9 ಮೀಟರ್ಗೆ ತಲುಪಿದೆ.
ಈಗಾಗಲೇ ಅಜಿಲಮೊಗರು ಮುಖ್ಯರಸ್ತೆ ಸೇರಿದಂತೆ ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ನೀರು ರಸ್ತೆಗೆ ನುಗ್ಗಿದೆ. ನೀರಿನ ಮತ್ತಷ್ಟು ಏರಿಕೆಯಾದರೆ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಟೋ-ರಿಕ್ಷಾಗಳು ಮತ್ತು ವ್ಯಾನ್ಗಳಲ್ಲಿ ಶಾಲೆಗೆ ತೆರಳುತ್ತಿದ್ದಾರೆ. ಆದರೆ, ಬಾಳ್ತಿಲ, ಪೆರ್ಣೆ ಮುಂತಾದ ನದಿ ತೀರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗಬೇಕಾಗಿದೆ. ಪ್ರವಾಹದ ಅಪಾಯವಿರುವ ಶಾಲೆಗಳ ಸಿಆರ್ಪಿ ಮತ್ತು ಎಸ್ಟಿಎಂಸಿ ಸಮಿತಿಗಳಿಗೆ ಅಗತ್ಯಕ್ಕೆ ತಕ್ಕಂತೆ ರಜೆ ಘೋಷಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.