ಪುತ್ತೂರು, ಜು.30(DaijiworldNews/AA): ಪೊಲೀಸರು ಮನೆಗೆ ನುಗ್ಗಿ ವಿನಾಕಾರಣ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಈಶ್ವರಮಂಗಲ ಪಂಚೋಡಿಯಲ್ಲಿ ಜುಲೈ 28ರಂದು ನಡೆದಿದೆ.
ಈಶ್ವರಮಂಗಲ ಪಂಚೋಡಿ ನಿವಾಸಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಜುಲೈ 28 ರಂದು ರಾತ್ರಿ 11 ಗಂಟೆ ಸುಮಾರಿಗೆ ತಾನು ಮನೆಯಲ್ಲಿ ಮಲಗಿದ್ದಾಗ ಬಾಗಿಲು ತಟ್ಟುವ ಶಬ್ದ ಕೇಳಿಸಿತು. ಬಾಗಿಲು ತೆರೆದಾಗ ನಾಲ್ವರು ಪೊಲೀಸರು ಮನೆಯಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂದು ಕೇಳಿದರು. ಬಳಿಕ ತನ್ನನ್ನು ಹೊರಕ್ಕೆ ಎಳೆದು ನಾಲ್ವರು ಪೊಲೀಸರು ವಿನಾಕರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ಪೊಲೀಸರು ಬಳಿಕ ಪೊಲೀಸ್ ಎಸ್ಐ ಹತ್ತಿರ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಸ್ಐ ನೀನು ಹೋಗು ಎಂದು ಕಳುಹಿಸಿದ್ದಾರೆ. ಆದರೆ ನಾಲ್ವರು ಪೊಲೀಸರು ನನಗೆ ಹಲ್ಲೆ ಮಾಡಿದ ಕಾರಣ ನನ್ನ ಕೈಗೆ ಗಾಯವಾಗಿದ್ದು, ತಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಗಾಯಾಳು ಆರೋಪ ಮಾಡಿದ್ದಾನೆ.