ಮೂಡುಬಿದಿರೆ, ಜು.29(DaijiworldNews/AA): ಸ್ನಾನದ ಕೋಣೆಯ ಗ್ಯಾಸ್ ಗೀಸರ್ ನ ರಾಸಾಯನಿಕ ಲೀಕ್ ಆಗಿ ಯುವಕನೋರ್ವ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಮೂಡುಬಿದಿರೆಯ ಕೋಟೆಬಾಗಿಲಿನ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.
ಕೋಟೆಬಾಗಿಲು ನಿವಾಸಿ ಶಾರಿಕ್ (18) ಮೃತ ದುರ್ದೈವಿ.
ಶಾರಿಕ್ ಸ್ನಾನಕ್ಕೆಂದು ತೆರಳಿದಾತ ಬಹಳ ಹೊತ್ತಾದರೂ ಹೊರ ಬಂದಿರುವುದಿಲ್ಲ. ಇದನ್ನು ಗಮನಿಸಿದ ಆತನ ಸಹೋದರ ಹೋಗಿ ನೋಡಿದಾಗ ಶಾರಿಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಶಾರಿಕ್ ಸ್ನಾನದ ಕೋಣೆಯಲ್ಲಿ ಬಹಳ ಹೊತ್ತು ಕಳೆಯುವುದು ಸಾಮಾನ್ಯವಾಗಿತ್ತು. ಹೀಗಾಗಿ ಘಟನೆಯ ಕುರಿತ ಮನೆಯವರ ಮೊದಲು ಅರಿವಾಗಲಿಲ್ಲ. ಸ್ನಾನದ ಕೋಣೆಯು ಬಂದ್ ಆಗಿದ್ದು ಗಾಳಿಯಾಡದ ಸ್ಥಿತಿ ಇದ್ದ ಕಾರಣ ಗೀಸರ್ ನ ರಾಸಾಯನಿಕ ಹರಡಿದಾಗ ಶಾರಿಕ್ ಗೆ ಹೊರಬರಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.