ವಿಟ್ಲ, ಜು 28(DaijiworldNews/MS): ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿಟ್ಲದ ಪರ್ತಿಪ್ಪಾಡಿಯಲ್ಲಿ ಸಂಭವಿಸಿದೆ.
ಮೃತರುವಿನ್ಸೆಂಟ್ ಡಿ ಸೋಜಾ ರವರ ಪುತ್ರಿ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ ಗ್ಲೀನಾ ಡಿಸೋಜಾ(14) ಎಂದು ಗುರುತಿಸಲಾಗಿದೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಈಕೆಯನ್ನು ಕೆಲ ದಿನಗಳ ಹಿಂದೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜು 28 ರಂದು ನಿಧನರಾದರು
ಮೃತರು ತಂದೆ ವಿನ್ಸೆಂಟ್ ಡಿಸೋಜಾ ತಾಯಿ ಲವಿನಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.