ವಿಟ್ಲ, ಮೇ 17(Daijiworld News/SM): ಸಾರಡ್ಕದಲ್ಲಿ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಕೇರಳದಿಂದ ಬಂದ ತಂಡ ಗುಂಪುಕಟ್ಟಿಕೊಂಡು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಣ್ಮಕಜೆ ಗ್ರಾಮದ ಚೌರ್ಕಾಡು ನಿವಾಸಿ ಅಶ್ರಫ್ ಯಾನೆ ಹಸೈನಾರ್(29) ಬಂಧಿತ ಆರೋಪಿಯಾಗಿದ್ದಾನೆ. ಕೇರಳದಲ್ಲಿ ಹುಡುಗಿಯನ್ನು ಅಪಹರಣ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಾಪಾಸಣೆ ನಡೆಸುತ್ತಿದ್ದರು.
ಈ ಸಮಯದಲ್ಲೇ ಕೇರಳ ಕಡೆಯಿಂದ ಬಂದ ತಂಡ ಬೊಲೆರೊ ವಾಹನವೊಂದಕ್ಕೆ ತಮ್ಮ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆ. ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ಮುಂದಾಗಿದ್ದಾರೆ. ಹಸೈನಾರ್, ಈ ತಂಡಕ್ಕೆ ಸೇರಿದ ವ್ಯಕ್ತಿಯಾಗಿದ್ದಾನೆ.
ಅಡ್ಯನಡ್ಕದಲ್ಲಿ ಈತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.