ಸುಳ್ಯ, ಜು 25(DaijiworldNews/ AK): ಸುಬ್ರಹ್ಮಣ್ಯ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಜುಲೈ 26 ರಂದು ಸಂಜೆ 6:56 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗಗಳ ನಡುವೆ ಮಣ್ಣಿನ ಸವಕಳಿ ಸಂಭವಿಸಿದೆ, ಹಲವು ರೈಲು ಸೇವೆಗಳನ್ನು ರದ್ದು ಪಡಿಸಲಾಗಿದೆ.
ರದ್ದು ಪಡಿಸಲಾದ ರೈಲು ಸೇವೆಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 16595 KSR ಬೆಂಗಳೂರು - ಕಾರವಾರ ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್ಪ್ರೆಸ್, 26.07.2024 ರಂದು ಪ್ರಾರಂಭವಾಗುವ ರೈಲು ಸಂಚಾರ ರದ್ದು ಪಡಿಸಲಾಗಿದೆ.
ರೈಲು ಸಂಖ್ಯೆ 16596 ಕಾರವಾರ - ಕೆಎಸ್ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಪ್ರಯಾಣ ರದ್ದು ಪಡಿಸಲಾಗಿದೆ.
ರೈಲು ಸಂಖ್ಯೆ 16586 ಮುರ್ಡೇಶ್ವರ - SMVT ಬೆಂಗಳೂರು ಎಕ್ಸ್ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಸಂಚಾರ ರದ್ದು ಪಡಿಸಲಾಗಿದೆ.
ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್, 26.07.2024 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದು ಪಡಿಸಲಾಗಿದೆ.
ಪರಿಹಾರ ಮತ್ತು ರಕ್ಷಣಾ ತಂಡಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದೆ ಮತ್ತು ಪುನಃಸ್ಥಾಪನೆ ಕಾರ್ಯಗಳು ಪ್ರಸ್ತುತ ಪ್ರಗತಿಯಲ್ಲಿವೆ.
ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ ಎಸ್ ಜೈನ್ ಮತ್ತು ವಿಭಾಗಗಳ ಪ್ರಧಾನ ಮುಖ್ಯಸ್ಥರು ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೈಸೂರಿನ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ಪುನಶ್ಚೇತನ ಪ್ರಯತ್ನಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ಅವಧಿಯಲ್ಲಿ ರೈಲು ಸೇವೆಗಳ ಇತ್ತೀಚಿನ ಮಾಹಿತಿಯೊಂದಿಗೆ ನವೀಕರಿಸಲು ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.