ಕಾಸರಗೋಡು, ಜು 26 (DaijiworldNews/MS): ಹೊಡೆದಾಟಕ್ಕೆ ಸಂಬಂಧಪಟ್ಟಂತೆ ಶಾಲೆಯು ಏಳು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದು್ಕೊಂಡಿದ್ದು, ಅಮಾನತಗೊಳಿಸಲಾಗಿದೆ.
ನಾಯಮ್ಮರ ಮೂಲೆ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಬುಧವಾರ ಸಂಜೆ ವಿದ್ಯಾನಗರ ಬಿ.ಸಿ ರೋಡ್ ಜಂಕ್ಷನ್ ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಘಟನೆ ಬಗ್ಗೆ ಗಂಭೀರವಾಗಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿ ಏಳು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಂಡಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಡೆದಾಟ ನಡೆಸಿದ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಶಾಲಾ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದ್ದರು. ವಿದ್ಯಾರ್ಥಿಗಳ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಇದು ಶಾಲಾ ಆವರಣದ ಹೊರಗಡೆಗೂ ವಿಸ್ತರಿಸಿತ್ತು. ವಿದ್ಯಾರ್ಥಿಗಳ ನಡುವಿನ ಘರ್ಷಣೆಯು ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಈ ಹಿನ್ನಲೆ ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.