ಬಂಟ್ವಾಳ, ಜು 25 (DaijiworldNews/ AK): ತಾಲೂಕಿನಾದ್ಯಂತ ಗಾಳಿ ಮಳೆಯ ಆರ್ಭಟ ಬುಧವಾರ ರಾತ್ರಿಯಿಂದ ಜೋರಾಗಿದ್ದು ಹಲವೆಡೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಮಾಣಿ, ನೇರಳಕಟ್ಟೆ, ಅನಂತಾಡಿ. ಕಡೇಶ್ವಾಲ್ಯ ದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿಗೆ ಮರಗಳು ಬಿದ್ದು, ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ನೇತ್ರಾವತಿ ನದಿಯಲ್ಲಿಯೂ ನೀರಮಟ್ಟದಲ್ಲಿ ಏರಿಕೆಯಾಗಿದ್ದು 7.5 ಮೀಟರ್ ವರೆಗೆ ನೀರಮಟ್ಟ ಏರಿಕೆಯಾಗಿದೆ.
ತಾಲೂಕಿನ ನೇರಳ ಕಟ್ಟೆ ಹಾಗೂ ಮಿತ್ತೂರಿನಲ್ಲಿ ಬೃಹತ್ ಮರಗಳು ನೆಲಕಚ್ಚಿದ್ದು, ಗುರುವಾರ ಮುಂಜಾನೆ ಈ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಹಲವು ಕಡೆಗಳಲ್ಲಿ ವಿದುತ್ ಕಂಬಗಳೂ ಧರಶಾಹಿಯಾಗಿದ್ದು, ವಿದ್ಯುತ ವ್ಯಸ್ಥೆ ಸರಿಪಡಿಸಲು ಮೆಸ್ಕಾಂ ನೌಕಕರು ವ್ಯಾಪಕ ತ್ರಾಸ ಪಡಬೇಕಾಯಿತು.
ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಇಸ್ಮಾಯಿಲ್ ಮದನಿ ಎಂಬವರ ಮನೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು, ಭಾರೀ ನಷ್ಟ ಸಂಭವಿಸಿದೆ. ಘಟನೆವೇಳೆ ಮನೆಮಂದಿ ಮನೆಯೊಳಗೆ ಇದ್ದರೂ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಡೇಶಿವಾಲಯ ಗ್ರಾಮದ ವನೀತ ಬಿ ರೈ ಮತ್ತು ಎನ್ ವೀರಪ್ಪ ನಾಯ್ಕರ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ಸುಮಾರು 600 ಫಲ ಬರುವ ಅಡಿಕೆ ಮರ ಹಾಗೂ ತೆಂಗಿನ ಮರಗಳು ಬಿದ್ದು ನಷ್ಟವಾಗಿದೆ.
ಮಾಣಿಲ ಗ್ರಾಮದ ದಂಡೆಪ್ಪಾಡಿ ಎಂಬಲ್ಲಿ, ರಾಮ ಮೂಲ್ಯ ಎಂಬವರ ಮನೆ, ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ. ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಜಾನಕಿರವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿರುತ್ತದೆ.ಸದ್ರಿ ಮನೆಯಲ್ಲಿ ಯಾರು ವಾಸ್ತವ್ಯ ಇರುವುದಿಲ್ಲ.ಪುಣಚ ಗ್ರಾಮದ ಬೇರಿಕೆ ಎಂಬಲ್ಲಿ ನಾರಾಯಣ ನಾಯ್ಕ ರವರ, ಮನೆಗೆ ತಾಗಿಕೊಂಡಿರದ, ಹಟ್ಟಿ ಕೊಟ್ಟಿಗೆಗೆ ಹಾನಿಯಾಗಿದೆ.
ಇಡ್ಕಿದು ಗ್ರಾಮದ ಅಬ್ದುಲ್ ರಹಿಮಾನ್ರವರ ಮನೆಗೆ ಮರ ಬಿದ್ದಿರುತ್ತದೆ. ಮನೆಗೆ ಹಾನಿಯಾಗಿರುತ್ತದೆ. ಮನೆಮಂದಿಯನ್ನು ಮಗನ ಮನೆಗೆ ಶಿಫ್ಟ್ ಮಾಡಲಾಗಿದೆ. ಬಿ ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ದಿನೇಶ ಬಿನ್ ಕೆ ನೇಮು ರವರ ವಾಸದ ಮನೆಯ ಗೋಡೆ ಕುಸಿದಿರುತ್ತದೆ.ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.