ಕಾಸರಗೋಡು, ಜು 23(DaijiworldNews/ AK): ಜಿಲ್ಲೆಯಲ್ಲಿ ಗಾಳಿ- ಮಳೆಗೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 3. 60 ಕೋಟಿ ರೂ. ಗಳ ಕೃಷಿ ಹಾನಿ ಉಂಟಾಗಿದೆ ಜೂನ್ ಒಂದರಿಂದ ಜುಲೈ 23ರ ತನಕ ದ ಅಂಕಿ ಅಂಶದಂತೆ 334. ಹೆಕ್ಟೇರ್ ಸ್ಥಳದಲ್ಲಿ ಕೃಷಿ ನಷ್ಟ ಉಂಟಾಗಿದೆ.
ಕೃಷಿ ಇಲಾಖೆಯ ಅಂಕಿ ಅಂಶದಂತೆ 5, 578 ಕೃಷಿಕರಿಗೆ ಹಾನಿ ಉಂಟಾಗಿದೆ.ಅಡಿಕೆ , ತೆಂಗು , ಬಾಳೆ, ರಬ್ಬರ್ , ಕರಿಮೆಣಸು , ತರಕಾರಿ , ಭತ್ತ ಕೃಷಿಗೆ ಅಪಾರ ಹಾನಿ ಉಂಟಾಗಿದೆ. 18, 286 ಕಂಗು , 3, 9 17 ತೆಂಗಿನ ಗಿಡಗಳು , 17, 606 ಬಾಳೆ ಗಿಡಗಳು ಹಾನಿಗೊಂಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಅಧಿಕೃತ ಅಂಕಿ ಅಂಶಗಳಿಗಿಂತ ಎರಡು ಪಟ್ಟು ಹೆಚ್ಚಿನ ಕೃಷಿ ಹಾನಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಅಡಿಕೆ ಕೃಷಿ ಫಸಲು ರೋಗಕ್ಕೆ ತುತ್ತಾಗಿದೆ . ಈ ವರ್ಷ ಗಾಳಿಯ ಅಬ್ಬರಕ್ಕೆ ಅತ್ಯಧಿಕ ಕೃಷಿ ಹಾನಿ ಉಂಟಾಗಿದೆ