ಉಡುಪಿ, ಜು.21(DaijiworldNews/AA): ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಡಲ್ಕೊರೆತ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಪರಿಶೀಲಿಸಿದರು.
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ನೆರೆಯ ಸ್ಥಿತಿ ಉಂಟಾಗಿತ್ತು ಹಾಗೂ ಕರಾವಳಿ ತೀರದಲ್ಲಿ ಉಂಟಾಗಿರುವ ಕಡಲು ಕೊರತ ಉಂಟಾಗಿದೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಕಡಲು ಭಾಗದಲ್ಲಿರುವ ಜನರಿಗೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಇಂದು ಸಾಯಂಕಾಲದವರೆಗೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತೆನೆ. ಜನರಿಗೆ ದೊರಕಬೇಕಾದ ಪರಿಹಾರವನ್ನು ನೀಡುತ್ತವೆ ಎಂದು ಹೇಳಿದರು.
ಇನ್ನು ನೆರೆ ಬಂದರೂ ಉಡುಪಿಗೆ ಭೇಟಿ ನೀಡದ ವಿಚಾರ ಮತ್ತು ಉಡುಪಿಯಲ್ಲಿ ಇದ್ದು ನೆರೆಹಾನಿ ನೋಡುವಂತೆ ಜನರ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು ಇಲ್ಲೇ ಮನೆ ಮಾಡಲು ತಯಾರಿದ್ದೇನೆ. ಜವಾಬ್ದಾರಿ ಇದೆ ಸೆಶನ್ ನಡಿತಾ ಇದೆ. ಇಂದು ಭಾನುವಾರ ರಜೆ ಇದ್ದಾಗಲೂ ಬಂದಿದ್ದೇನೆ ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ. 247 ಜಿಲ್ಲಾಡಳಿತ, ಸರ್ಕಾರ ಎಚ್ಚರವಾಗಿದೆ. ಎಲ್ಲೂ ಯಾವ ತೊಂದರೆ ಆಗಬಾರದು ಎಂದರು.
ಪ್ರಾಣ ಹಾನಿ ಆಗಬಾರದು ಎಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಯಾವುದೇ ತೊಂದರೆ ಆಗಬಾರದು ಎಂದು ಈಗಾಗಲೇ ಹಲವು ಕ್ರಮ ಕೈಗೊಂಡಿದ್ದೇವೆ. 25 ದಿನಗಳ ಹಿಂದೆ ಜಿಲ್ಲಾ ಮಟ್ಟದ ಸಭೆ ನಡೆಸಿದ್ದೇವೆ. ಅರಣ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. 500 ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಮೆಸ್ಕಾಂನವರಿಗೆ ಈ ಮೊದಲೇ ಸೂಚನೆ ಕೊಟ್ಟಿದ್ದೇನೆ. ಶಾಲೆಯ ಪಕ್ಕ ಇರುವ ವಿದ್ಯುತ್ ತಂತಿಗಳನ್ನು ತೆರವು ಮಾಡಲು ಸೂಚನೆ ಕೊಟ್ಟಿದ್ದೇನೆ. ಅವರು ಕೂಡ ಅಪಾಯ ಇರುವಲ್ಲಿ ತೆರವು ಮಾಡಿದ್ದಾರೆ.ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು, ಸ್ವಚ್ಛಗೊಳಿಸಿದ್ದಾರೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ಇಟ್ಟಿದ್ದೇವೆ ಎಂದು ತಿಳಿಸಿದರು.
ಬಳಿಕ ಕಡಲು ಕೊರೆತಕ್ಕೆ 5 ಕೋಟಿ ಬಿಡುಗಡೆ ಆಗದ ವಿಚಾರಕ್ಕೆ ಉತ್ತರ ನೀಡಿದ ಉಸ್ತುವಾರಿ ಸಚಿವರು ಹಳೆಬಾಕಿ ಪಾವತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ತಕ್ಷಣ 5 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ. 5 ಕೋಟಿ ಬೇಗ ಬರುತ್ತೆ ಎಂದರು.
ರಾಜ್ಯದಲ್ಲಿ ಪರಿಹಾರ ತಾರತಮ್ಯ ಹಾಗೂ ಇಂದಿನ ಸರ್ಕಾರ 5 ಲಕ್ಷ ಈಗ 1.20 ಪರಿಹಾರ-
ಈ ಬಗ್ಗೆ ಗೊಂದಲ ಇದೆ. ಕಳೆದ ಬಾರಿ ಮಳೆಯಾದಾಗ ಮನೆ ಬಿದ್ದರೆ 5 ಲಕ್ಷ ಕೊಟ್ಟಿದ್ದೇವೆ. ಸರ್ಕಾರ ಬಂದ ಮೊದಲ ವರ್ಷದಲ್ಲಿ 5 ಲಕ್ಷ ಕೊಟ್ಟಿದ್ದೇವೆ. ಈ ಬಾರಿ ಇನ್ನು ನನಗೆ ಸ್ಪಷ್ಟತೆ ಸಿಕ್ಕಿಲ್ಲ. ನಾನು ಗೊಂದಲ ಸೃಷ್ಟಿ ಮಾಡುವುದಿಲ್ಲ. ಮಳೆ ಆರಂಭವಾಗಿ ಎಷ್ಟು ದಿನ ಆಯ್ತು ಆದಷ್ಟು ಬೇಗ ಸರ್ಕಾರಿ ಮಟ್ಟದಲ್ಲಿ ತಿಳಿದುಕೊಂಡು ಹೇಳುತ್ತೆನೆ. ಬಿಜೆಪಿ ಅವರಿಗೆ ಉತ್ತರ ಕೊಡಲು ನಾವು ಸಮರ್ಥರು ಇದ್ದೇವೆ. ಸಿದ್ದರಾಮಯ್ಯನವರು ಸಮರ್ಥರಿದ್ದಾರೆ ಬಿಜೆಪಿಯವರು ಹತಾಶರಾಗಿದ್ದಾರೆ ಹಾಗಾಗಿ ಏನೇನು ಹೇಳುತ್ತಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಕೋಟ ಶ್ರೀನಿವಾಸ ಪೂಜಾರಿ ಪತ್ರ ವಿಚಾರ-
ಈ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯಿರಿ. ಮುಖ್ಯಮಂತ್ರಿಗಳು ಶ್ರೀನಿವಾಸ ಪೂಜಾರಿ ಹೆಸರು ಹೇಳಿದ್ದಾರೆ. ರಾಜಕಾರಣಕ್ಕಾಗಿ ಹೇಳಿಕೆ ಕೊಡುವ ಜಾಯಮಾನದವರು ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯನವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ 15 ಬಾರಿ ಬಜೆಟ್ ಮಂಡಿಸಿದ್ದಾರೆ. ಸುಮ್ಮನೆ ರಾಜಕೀಯಕ್ಕಾಗಿ ಆರೋಪ ಮಾಡುವವರಲ್ಲ ಪಕ್ಕಾ ಸಬೂತಿದ್ದರೆ ಮಾತ್ರ ಆರೋಪ ಮಾಡುತ್ತಾರೆ ಸಿದ್ದರಾಮಯ್ಯನವರು ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.