ಕಾಸರಗೋಡು, ಜು 20 (DaijiworldNews/MS): ಹಾಡಹಗಲೇ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗಂಜಿಮಠದ ಸಫ್ವಾನ್ (20), ಮಂಜೇಶ್ವರ ದ ಮುಹಮ್ಮದ್ ಶಿಹಾಬ್ (20) ಮತ್ತು ಗಂಜಿಮಠದ ಮುಹಮ್ಮದ್ ಅರ್ಫಾಝ್ (19) ಬಂಧಿತರು. ಇವರು ಹಲವಾರು ಕಳವು ಪ್ರಕರಣ ಗಳ ಆರೋಪಿ ಗಳು ಎಂದು ಪೊಲೀಸರು ತಿಳಿಸಿದ್ದಾರೆ ಮಂಗಳೂರು ಅಲ್ಲದೆ ಕಾಸರಗೋಡು , ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ.
ಕಳೆದ ಜೂನ್ ನಾಲ್ಕರಂದು ಬೇಕೂರು ಸುಭಾಶ್ ನಗರದ ಆಯಿಷಾ ಯೂಸಫ್ ರವರ ಮನೆಯಿಂದ ಕಳವು ನಡೆದಿತ್ತು. ಐ ಫೋನ್ ಸೇರಿದಂತೆ ಹಲವು ಸಾಮಾಗ್ರಿಗಳನ್ನು ಕಳವು ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕದ ಅಶ್ರಫ್ ಅಲಿ (25) ಎಂಬಾತನನ್ನು ಬಂಧಿಸಲಾಗಿತ್ತು. ಈತನಿಂದ ಇವರ ಬಗ್ಗೆ ಮಾಹಿತಿ ಲಭಿಸಿತ್ತು.