ಸುಳ್ಯ, ಜು. 19(DaijiworldNews/AA): ಸುಬ್ರಮಣ್ಯದ ಕುಮಾರಾಧಾರ ನದಿಯ ನೆರೆ ನೀರಿನಲ್ಲಿ ಸೋಮವಾರ ರಾತ್ರಿ ಕೊಚ್ಚಿ ಹೋಗಿದ್ದ ಆನೆಯ ಮೃತದೇಹ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಆನೆಯ ಮೃತದೇಹ ಪತ್ತೆಗೆ ಮಂಗಳವಾರ ಮತ್ತು ಬುಧವಾರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ ಆನೆಯ ಮೃತದೇಹದ ಬಗ್ಗೆ ಯಾವುದೇ ಸುಳಿವು ಅಧಿಕಾರಿಗಳಿಗೆ ದೊರೆತಿರಲಿಲ್ಲ.
ಇನ್ನು ಆನೆಯ ಮೃತದೇಹ ಪತ್ತೆಗೆ ಗುರುವಾರವೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು
ಆನೆಯ ಮೃತದೇಹ ನದಿಯ ಕೆಳಭಾಗದಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಅಥವಾ ನದಿ ದಡದ ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆಗಾಗಿ ಆನೆಯ ಮೃತದೇಹವನ್ನು ಪತ್ತೆಹಚ್ಚುವುದು ಅನಿವಾರ್ಯವಾಗಿರುವುದರಿಂದ ಶೋಧ ಮುಂದುವರಿದಿದೆ.