ಕಾರ್ಕಳ, ಜು 18 (DaijiworldNews/MS): ಕಾರ್ಕಳ ಪುರಸಭಾ ಆಡಳಿತ ಅಧೀನಕ್ಕೊಳಪಟ್ಟ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರದ ವೇಳೆ ಮರವೊಂದು ಉರುಳಿಬಿದ್ದ ಘಟನೆ ಸಂಭವಿಸಿದೆ.
ರುದ್ರಭೂಮಿಯಲ್ಲಿ ರೆಂಜಾಳ ಮತ್ತು ಸಾಣೂರು ಗ್ರಾಮದ ವ್ಯಕ್ತಿಗಳ ಮೃತದೇಹಗಳನ್ನು ದಹಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ರುಧ್ರಭೂಮಿಯ ಮೇಲ್ಛಾವಣಿಗೆ ಬಿದ್ದಿದೆ. ಪರಿಣಾಮವಾಗಿ ಅಂದಾಜು ಸುಮಾರು 50 ಸಾವಿರ ನಷ್ಟ ಆಗಿರುತ್ತದೆ.
ರುಧ್ರಭೂಮಿಯಲ್ಲಿ ಕೆಲಸ ಮಾಡುವ ಪ್ರಕಾಶ್ ರಾವ್, ಗೋವಿಂದ ರಾವ್, ಮಹೇಶ್ ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.