ಉಡುಪಿ, ಜು. 18(DaijiworldNews/AK): ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಉಡುಪಿಯ ಕಟ್ಟೆಗುಡ್ಡೆಯಲ್ಲಿ ಜು.18ರಂದು ನಡೆದಿದೆ.ಕಡೆಕಾರು ಪಂಚಾಯಿತಿಯ ಶಾರದ ಪೂಜಾರಿ ಎಂಬುವರಿಗೆ ಸೇರಿದ ಮನೆ. ಘಟನೆ ವೇಳೆ ಮನೆಯಲ್ಲಿ 10 ಮಂದಿ ವಾಸವಿದ್ದರು.
ಮನೆ ಸಂಪೂರ್ಣ ಕುಸಿದು ಬೀಳುವ ಕೇವಲ ಹತ್ತು ನಿಮಿಷಗಳ ಮೊದಲು ಕುಟುಂಬವು ಆವರಣವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. 30 ವರ್ಷಗಳಷ್ಟು ಹಳೆಯದಾದ ಈ ಮನೆಯು ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿದ್ದು, ಮಳೆಗೆ ಕುಸಿತಗೊಂಡಿದೆ.
ಭಾರೀ ಮಳೆಗೆ ಮಣ್ಣಿನ ಗೋಡೆಯ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಕುಸಿದು ಬೀಳುವ ಮುನ್ನವೇ ನಾಲ್ವರು ಮಕ್ಕಳು ಕೊಠಡಿಯೊಳಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಟಿಕೆಗಳು, ಬಟ್ಟೆಗಳು ಮತ್ತು ಇತರ ದಾಖಲೆಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ.
ಮನೆಯಲ್ಲಿ ವಾಸವಿದ್ದ ಕುಟುಂಬ ಇದೀಗ ಉಡುಪಿಯ ಕಡೆಕಾರ್ ನಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ.