ಮಂಗಳೂರು,ಜು. 18(DaijiworldNews/AK): ಅಂಚೆ ಇಲಾಖಾ ನೌಕರರ ಆಕಾಂಕ್ಷಿಗಳ ತಂಡ ಮಂಗಳೂರು ಇವರ ವತಿಯಿಂದ ನಡೆದ ಎರಡು ದಿನಗಳ ಉಚಿತ ತರಬೇತಿ ಶಿಬಿರದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ನಡೆಯಿತು.
ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ ಹಾಗೂ ಶ್ರೀಹರಿನಾರಾಯಣದಾಸ ಆಸ್ರಣ್ಣರು ಮಂಗಳೂರು ಆಕಾಂಕ್ಷಿ ತಂಡದ ಕಾರ್ಯಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭ ಆಕಾಂಕ್ಷಿ ತಂಡದ ಇಲಾಖಾ ನೌಕರರು ಸ್ವಇಚ್ಛೆಯಿಂದ ನೀಡಿದ ಧನ ಸಹಾಯದಲ್ಲಿ ಉಳಿದ ರೂ25000 ಕಟೀಲು ವಿದ್ಯಾಸಂಸ್ಥೆಯ ವಿದ್ಯಾದಾನಕ್ಕೆ ನೀಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹಾಗೂ ಹಿರಿಯ ಅಂಚೆ ಅಧ್ಯಕ್ಷರಾದ ಎಂ ಸುಧಾಕರ ಮಲ್ಯ ಇವರು ಪರೀಕ್ಷಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ವೀರೇಶ್, ಧನಂಜಯ ಎಂ. ಗೌಡ, ಗುರುರಾಜ ಗುಡಿ,ಕಾಂಚನ ಎ. ತರಬೇತಿಯನ್ನು ಉಚಿತವಾಗಿ ನೀಡಿದರು.ನಾಗರಾಜ್ ಹೆಜಮಾಡಿ,ಕೇಶವ ಕಟೀಲು, ಸುಭಾಷ್ ಪಿ. ಸಾಲಿಯಾನ್, ದಯಾನಂದ ಜಿ ಕತ್ತಲ್ ಸಾರ್, ಶಂಕರ್ ಕೆ,ರಾಜೇಶ್,ಅವಿನಾಶ್,ಹರೀಶ್, ಸುನೀತಾ, ಸುಜಾತಾ,ವಿದ್ಯಾ,ಪ್ರದೀಪ್,ಗಂಗಾಧರ ಹಾಗೂ ತಂಡದ ಮತ್ತಿತರಿದ್ದರು.