ಮಂಗಳೂರು, ಜು. 18(DaijiworldNews/AK): ಜು. 16 ರಂದು ಮಂಗಳೂರಿನಲ್ಲಿ ನಡೆದ ದಕ್ಷಿಣ ಕರ್ನಾಟಕ ವಲಯದ ಉತ್ಕೃಷ್ಟತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಮ್ಮ ಮಂಗಳೂರು ಅಂಚೆ ವಿಭಾಗ ದಕ್ಷಿಣ ಕರ್ನಾಟಕ ವಲಯದಲ್ಲೇ “ ಅತ್ಯುತ್ತಮ ಅಂಚೆ ವಿಭಾಗ ” ಪ್ರಶಸ್ತಿಯನ್ನು ಪಡೆದಿದೆ.
ಇದರ ಜೊತೆಗೆ ಮಂಗಳೂರು ಅಂಚೆ ವಿಭಾಗಕ್ಕೆ ಈ ಕೆಳಗಿನ 17 ಇತರ ವಲಯ ಮಟ್ಟದ ಪ್ರಶಸ್ತಿಗಳೂ ಲಭಿಸಿವೆ.
ಅತ್ಯುತ್ತಮ NDC - ಪ್ರಥಮ ಸ್ಥಾನ
PMA APP ಬಳಕೆ - ಪ್ರಥಮ ಸ್ಥಾನ
MSSC ಖಾತೆ ತೆರೆಯುವಿಕೆ - ಪ್ರಥಮ ಸ್ಥಾನ
ಸಾವರಿನ್ ಗೋಲ್ಡ್ ಬಾಂಡ್ - ಪ್ರಥಮ ಸ್ಥಾನ
ಆಧಾರ್ ವ್ಯವಹಾರಗಳು - ದ್ವಿತೀಯ ಸ್ಥಾನ
ಸ್ಪೀಡ್ ಪೋಸ್ಟ್ D+0 ಬಟವಾಡೆ - ತೃತೀಯ ಸ್ಥಾನ
PLI NBP GDS ವಿಭಾಗ - ಕು.ಹೇಮಾವತಿ ಕಾಟಿಪಳ್ಳ ಪ್ರಥಮ ಸ್ಥಾನ
ಅತ್ಯುತ್ತಮ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ - ಶ್ರೀ ಸುಭಾಷ್ ಸಾಲಿಯಾನ್ - ತೃತೀಯ ಸ್ಥಾನ
GAG ಪಾಲಿಸಿಗಳು ಅಂಚೆ ವಿಭಾಗ - ಪ್ರಥಮ ಸ್ಥಾನ
GAG ಪಾಲಿಸಿಗಳು ಉಪವಿಭಾಗ - ಮಂಗಳೂರು ದಕ್ಷಿಣ - ಪ್ರಥಮ ಸ್ಥಾನ
GAG ಪಾಲಿಸಿಗಳು ಉಪವಿಭಾಗ - ಮಂಗಳೂರು ಉತ್ತರ - ದ್ವಿತೀಯ ಸ್ಥಾನ
GAG ಪಾಲಿಸಿಗಳು - ಉಪವಿಭಾಗ - ಮಂಗಳೂರು ಪಶ್ಚಿಮ - ತೃತೀಯ ಸ್ಥಾನ
GAG ವೈಯುಕ್ತಿಕ ಸಾಧನೆ - ಶ್ರೀ ಸುಭಾಷ್ ಸಾಲಿಯಾನ್ - ಪ್ರಥಮ ಸ್ಥಾನ
GAG ವೈಯುಕ್ತಿಕ ಸಾಧನೆ - ಶ್ರೀಮತಿ ಸುನೀತಾ ಬೊಂಡಂತಿಲ, ಕುಲಶೇಖರ - ದ್ವಿತೀಯ ಸ್ಥಾನ
GAG ವೈಯುಕ್ತಿಕ ಸಾಧನೆ - ಶ್ರೀಮತಿ ನಂದಿತಾ ಎನ್, ಕೊಣಾಜೆ - ತೃತೀಯ ಸ್ಥಾನ
ಅತ್ಯುತ್ತಮ End User GAG ಸುರಕ್ಷಾ ಚಕ್ರ ಶ್ರೀ ದಯಾನಂದ ಕತ್ತಲ್ ಸಾರ್ - ಚತುರ್ಥ ಸ್ಥಾನ
ಅತ್ಯುತ್ತಮ End User GAG ಸುರಕ್ಷಾ ಚಕ್ರ ಶ್ರೀ ಸುಭಾಷ್ ಸಾಲಿಯಾನ್ - ಐದನೇ ಸ್ಥಾನ.
ನಮ್ಮ ಮಂಗಳೂರು ದಕ್ಷಿಣ ಕರ್ನಾಟಕ ವಲಯದಲ್ಲಿ “ ಅತ್ಯುತ್ತಮ ಅಂಚೆ ವಿಭಾಗ ” ಪ್ರಶಸ್ತಿ ಹಾಗೂ ಇತರ ವಿಭಾಗೀಯ ಪ್ರಶಸ್ತಿಗಳನ್ನು ಪಡೆಯಲು ಕಳೆದ ಸಾಲಿನಲ್ಲಿ ತಾವೆಲ್ಲರೂ ತೋರಿದ ಅಪಾರ ಶ್ರಮ, ಸಮರ್ಪಣಾ ಮನೋಭಾವ ಮತ್ತು ಸೇವಾ ಮನೋಭಾವವೇ ಕಾರಣ. ಈ ಹೆಮ್ಮೆಯ ಪ್ರಶಸ್ತಿ ನಿಮ್ಮ ಸಾಧನೆಗೆ ಸಂದ ಗೌರವ. ಈ ಎಲ್ಲಾ ಪ್ರಶಸ್ತಿಗಳೂ ನಮ್ಮ ಮಂಗಳೂರಿನ ಪ್ರತಿಯೊಬ್ಬ ಸಹದ್ಯೋಗಿಗೂ ಸಮರ್ಪಿತ. ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು. ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದ ಎಲ್ಲಾ ಸಹದ್ಯೋಗಿ ಮಿತ್ರರಿಗೆ ವಿಶೇಷ ಅಭಿನಂದನೆಗಳು. ಈ ಯಶಸ್ಸು ನಮ್ಮೆಲ್ಲರ ಗೌರವದ ಜತೆಯಲ್ಲಿ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನಮಗೆ 2023-24 ರಲ್ಲಿ ಸಿಕ್ಕಿದ ಗೌರವವನ್ನು 2024-25 ರಲ್ಲೂ ಉಳಿಸಿಕೊಳ್ಳಬೇಕು. ಜತೆಗೆ ಇನ್ನಷ್ಟು ಇತರ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಿ ನಮ್ಮ ಮಂಗಳೂರು ವಿಭಾಗದ ಕೀರ್ತಿಯನ್ನು ಇನ್ನಷ್ಟು ಪ್ರಜ್ವಲಿಸೋಣ ಅನ್ನ ಕೊಡುವ ಇಲಾಖೆಯ ಸೇವೆಯೊಂದಿಗೆ ಜನಸೇವೆಯನ್ನು ಮಾಡೋಣ ಎಂದು ಸುಧಾಕರ ಮಲ್ಯ, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ ಇವರು ಪ್ರಶಸ್ತಿ ಪಡೆದ ಮತ್ತು ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿ ನುಡಿದರು.