ಬಂಟ್ವಾಳ, ಜು. 17(DaijiworldNews/AK):ಅಮೃತ ಭಾರತ್ ರೈಲ್ವೇ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ಬಂಟ್ವಾಳ ರೈಲ್ವೇ ನಿಲ್ದಾಣಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರ ಸಂಜೆ ಆಗಮಿಸಿ, ಕಾಮಗಾರಿ ಪರಿಶೀಲನೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀನಾರಾಯಣ ಬಂಟ್ವಾಳ ಅವರು ಈ ಕುರಿತು ಅಹವಾಲು ಸಲ್ಲಿಸಿದ್ದರು. ಈ ಕುರಿತು ಸಂಸದ ಬ್ರಿಜೇಶ್ ಚೌಟ ಅವರ ವಿಶೇಷ ಕೋರಿಕೆ ಹಾಗೂ ರೈಲ್ವೆ ಸಚಿವ ಸೋಮಣ್ಣ ಸೂಚನೆಯಂತೆ ರೈಲ್ವೇ ಇಲಾಖೆಯ ಡಿಆರ್ ಎಂ. ಶಿಲ್ಪಾ ಅಗರವಾಲ್, ನೈರುತ್ಯ ರೈಲ್ವೇ ಮೈಸೂರು ವಿಭಾಗದ ಜಿಎಂ ಅರವಿಂದ ಶ್ರಿವಾಸ್ತವ್ ಸಹಿತ ಅಧಿಕಾರಿಗಳ ತಂಡ ಅಗಮಿಸಿ ಬಂಟವಾಳ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಯ ಗುಣಮಟ್ಟ ಅವ್ಯವಸ್ಥೆಯನ್ನು ಪರಿಶೀಲಿಸಿದರು.
ಇಲ್ಲಿನ ಶೌಚಾಲಯ, ಪ್ಲಾಟ್ಫಾರ್ಮ್ ಮೇಲ್ಛಾವಣಿ ಸಹಿತ ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲಾಯಿತು. ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆಯು ಸೂಚಿಸಿದರು. ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಪುಪ್ಪರಾಜ ಚೌಟ, ಚರಣ್ ಜುಮಾದಿಗುಡ್ಡೆ, ವಸಂತ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.