ಬೆಳ್ತಂಗಡಿ, ಮೇ16(Daijiworld News/SS): ಸುಮಾರು 600ಕ್ಕೂ ಹೆಚ್ಚು ವರುಷಗಳ ಇತಿಹಾಸವಿರುವ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ನಾಗರಹಾವು ಕಾಣಿಸಿಕೊಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಬೆಳ್ತಂಗಡಿಯ ಬೆಳಲು ದೇವಾಲಯದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಾಲಯದ ಅವರಣದಲ್ಲಿ ಪವಾಡ ನಡೆದಿರುವುದು ಬೆಳಕಿಗೆ ಬಂದಿದೆ. ಬೆಳಾಲು ಗ್ರಾಮದಲ್ಲಿರುವ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜಿರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ನಾಗರ ಹಾವು ಕಾಣಿಸಿಕೊಂಡು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.
ಬೆಳಲು ಗ್ರಾಮದ ಈ ದೇವಸ್ಥಾನದಲ್ಲಿ ಜಿರ್ಣೋದ್ಧಾರ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ, ಕ್ಷೇತ್ರದಲ್ಲಿ ಅಶ್ಲೇಷ ಪೂಜೆ ವಿಜೃಂಭಣೆಯಿಂದ ನಡೆಸಲಾಗಿತ್ತು. ಬಾಲಾಲಯದಲ್ಲಿದ್ದ ದೇವರ ಮೂರ್ತಿಗಳನ್ನು ನವೀಕರಣಗೊಂಡ ಕ್ಷೇತ್ರದ ಒಳಗೆ ಕೊಂಡೊಯ್ಯುವ ಸಂದರ್ಭದಲ್ಲಿ ನಾಗರ ಹಾವು ಕಾಣಸಿಕ್ಕಿದ್ದು ಎಲ್ಲರಲ್ಲಿ ಆಶ್ಚರ್ಯ ಉಂಟುಮಾಡಿದೆ.
ಕ್ಷೇತ್ರದಲ್ಲಿ ಇಂದು ಬಿಂಬ ಪ್ರತಿಷ್ಠಾಪನೆ ನಡೆಯಲಿದ್ದು, ಬಿಂಬ ಪ್ರತಿಷ್ಠಾಪನೆಗೆ ಮುಂಚೆಯೇ ನಾಗರಹಾವು ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ ಜಿರ್ಣೋದ್ಧಾರ ಸಂದರ್ಭದಲ್ಲಿ ಈ ನಾಗರಹಾವು ಕ್ಷೇತ್ರದ ಸುತ್ತಲೂ ತಿರುಗುತ್ತಿತ್ತು ಎಂದು ಹೇಳಲಾಗಿದೆ.