ಕಾರ್ಕಳ, ಜು. 15(DaijiworldNews/AK): ರಾಷ್ಟ್ರೀಯ ಹೆದ್ದಾರಿ - 169 ಸಾಣೂರಿನ ಪದ್ಮನಾಭನಗರ ಗುಡ್ಡದ ಬಳಿಯಿಂದ ಮುದ್ದಣ್ಣ ನಗರಕ್ಕೆ ಹೋಗುವ ಸಂಪರ್ಕ ಅಳವಡಿಸಲಾಗಿದ್ದ ಸ್ಲಾಬ್ ಮುರಿದು ಬಿದ್ದ ಘಟನೆ ಸಂಭವಿಸಿದೆ.
ಸಾರ್ವಜನಿಕರ ತೊಂದರೆಗೆ ಕೂಡಲೇ ಸ್ಪಂದಿಸಿದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆ ತುರ್ತು ದುರಸ್ಥಿ ಕಾಮಗಾರಿ ನಡೆಸಿ, ಕೇವಲ ಮೂರು ನಾಲ್ಕು ಗಂಟೆಯ ಒಳಗೆ ಸಂಪರ್ಕ ಕಡಿತಗೊಂಡಿದ್ದ ರಸ್ತೆಯ ಪಕ್ಕದಲ್ಲಿಯೇ ಬದಲಿ ರಸ್ತೆ ಕೂಡಲೇ ಸರಿಪಡಿಸಿ ಸುವ್ಯವಸ್ಥಿತಗೊಳಿಸಿ ಜನರ ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ _ 169 ಸಾಣೂರು ಪದ್ಮನಾಭನಗರ ಗುಡ್ಡದ ಬಳಿಯಿಂದ ಮುದ್ದಣ್ಣ ನಗರಕ್ಕೆ ಹೋಗುವ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ಜೋಡಿಸುವಲ್ಲಿ ಸೋಮವಾರ ಬೆಳಿಗ್ಗೆ ವಾಹನಗಳು ಸಂಚರಿಸುವಾಗ ಕಾಂಕ್ರೀಟ್ ಡ್ರೈನೇಜ್ಗೆ ಅಳವಡಿಸಿದ ಎರಡು ಮೂರು ಫ್ರೀ ಕಾಸ್ಟ್ ಸ್ಲಾಬ್ಗಳು ತುಂಡಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಬದಲಿ ರಸ್ತೆ ಕೂಡಲೇ ಸರಿಪಡಿಸಿ ಸುವ್ಯವಸ್ಥಿತಗೊಳಿಸಿ ಜನರ ಮತ್ತು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.