ಉಡುಪಿ, ಮೇ 16 (Daijiworld News/MSP): ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸಂಕಲ್ಪದಂತೆ ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿ ಮೇಲ್ಛಾವಣಿಗೆ ಸ್ವರ್ಣ ಹೊದಿಕೆಯ ಸ್ವರ್ಣ ಗೋಪುರ ಸಮರ್ಪಣೆ ಮತ್ತು ಬ್ರಹ್ಮಕಲಶದ ಅಂಗವಾಗಿ ಜೂನ್ 1 ರಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಕೃಷ್ಣ ಪ್ರಸಾದ ರೂಪದಲ್ಲಿ ಅಳವಡಿಸುವ 1008 ರಜತ ಕಲಶಗಳ ಮೆರವಣಿಗೆ ಆಯೋಜಿಸಲಾಗಿದೆ.
ಸಂಜೆ ಶ್ರೀ ಕೃಷ್ಣ ಮಠದಲ್ಲಿ ಗೋಪುರ ಇರಿಸುವ ಊರು ಸುವರ್ಣ ಕಲಶ, 1008 ರಜತ ಕಲಶಗಳನ್ನು ಮೆರವಣಿಯಲ್ಲಿ ತರಲಾಗುವುದು ಈ ಸಂದರ್ಭ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಹಾಭಾರತ ಧಾರವಾಹಿಯ ಕೃಷ್ಣಾರ್ಜುನ ಪಾತ್ರಧಾರಿಗಳಾದ ಸೌರಭ್ ಜೈನ್ (ಶ್ರೀ ಕೃಷ್ಣ) ಹಾಗೂ ಶಾಹೀರ್ ಶೇಖ್ ( ಅರ್ಜುನ ) ಮೆರವಣಿಗೆಯ ಸೊಬಗು ಹೆಚ್ಚಿಸಲಿದ್ದಾರೆ.
ಇವರು ಮೆರವಣಿಗೆಯಲ್ಲಿ ಚಾರಿತ್ರಿಕ ಪೋಷಾಕಿನಲ್ಲಿ ಮೆರವಣಿಗೆಗೆ ಮೆರುಗು ನೀಡಲಿದ್ದಾರೆ. ೧೫೦ ಭಜನಾ ತಂಡಗಳಿಂದ ಭಜನೆ, ೫೦ ಜನರಿಂದ ದೋಲಿವಾದನ ಮತ್ತು ಸ್ಥಳೀಯ ಸಾಂಸ್ಕೃತಿಕ ತಂಡಗಳಿಂದ ವಿವಿಧ ಕಲಾ ಪ್ರಕಾರಗಳಾ ನೃತ್ಯ ಪ್ರಕಾರ ಜರುಗಲಿದೆ.
ಮೆರವಣಿಗೆಯನ್ನು ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.