ಮಂಗಳೂರು, ಜು 12(DaijiworldNews/ AK): ಜು.8ರಂದು ರಾತ್ರಿ ಪಂಪ್ವೆಲ್ನಲ್ಲಿ ಕಿರಾಣಿ ಅಂಗಡಿ ಕಳವು ಪ್ರಕರಣ ನಡೆದಿದ್ದು, 16 ಗಂಟೆಯೊಳಗೆ ಇಬ್ಬರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಮೊಹಮ್ಮದ್ ನಜೀರ್ ಹೌಸಿಲ್ (27) ಮತ್ತು ಇಲಿಯಾಸ್ ಖಾನ್ (22) ಎಂದು ಗುರುತಿಸಲಾಗಿದೆ.
ಜುಲೈ 9 ರಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಡಿಸಿಪಿ, ಮತ್ತು ಎಸಿಪಿ ದಕ್ಷಿಣ ವಿಭಾಗದ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಟಿ ಡಿ ನಾಗರಾಜ್ ನೇತೃತ್ವದ ತನಿಖಾ ತಂಡದೊಂದಿಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಯಿತು. ತನಿಖಾ ತಂಡವು ಆಟೋ ಚಾಲಕರು ಮತ್ತು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದಾಗ, ಇಬ್ಬರು ಹಿಂದಿ ಮಾತನಾಡುವ ಯುವಕರು ರೈಲು ನಿಲ್ದಾಣದ ಕಡೆಗೆ ಪ್ರಯಾಣಿಸಿರುವುದನ್ನು ಪತ್ತೆಹಚ್ಚಿದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅವರು ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ. ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರೈಲು ಮಹಾರಾಷ್ಟ್ರದ ಸತಾರಾ ಮೂಲಕ ಹಾದು ಹೋಗಿತ್ತು.ನಂತರ ಪೊಲೀಸ್ ಕಮಿಷನರ್ ಜಿಆರ್ಪಿ ಪುಣೆಯನ್ನು ಸಂಪರ್ಕಿಸಿದರು, ಅವರು ಪುಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಯಿತು.10 ಲಕ್ಷ ನಗದು ಸೇರಿದಂತೆ ಕಳ್ಳತನವಾದ ಸೊತ್ತುಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.