ಮಂಗಳೂರು, ಜು 11(DaijiworldNews/MS): ಮುಂಜಾನೆ ಪಂಪ್ವೆಲ್ನ ಜನರಲ್ ಸ್ಟೋರ್ಗೆ ನುಗ್ಗಿದ ಕಳ್ಳರು ಸುಮಾರು 10 ಲಕ್ಷ ನಗದು ದೋಚಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಜು. 9ರಂದು ಮುಂಜಾನೆ ಉರ್ವ ಕೋಟೆಕಣಿ ಬಳಿಯ ಮನೆಗೆ ನುಗ್ಗಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರು ನಗರದಲ್ಲಿ ಭೀತಿ ಹುಟ್ಟಿಸಿದ್ದರು. ಅದೇ ದಿನ ರಾತ್ರಿ ಹಲವು ಕಳ್ಳತನ ಪ್ರಕರಣ ನಡೆದಿತ್ತು. ಆದರೆ ಈ ಪ್ರಕರಣಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ ಎನ್ನಲಾಗಿದೆ.
ಪಂಪ್ವೆಲ್ನಲ್ಲಿರುವ ಲೋಟಸ್ ಗ್ಯಾಲಕ್ಸಿಯ ನೆಲಮಹಡಿಯಲ್ಲಿರುವ ಜನರಲ್ ಸ್ಟೋರಿಗೆ ಸೋಮವಾರ ರಾತ್ರಿ 11:35ರ ಸುಮಾರಿಗೆ ಕಳ್ಳರು ನುಗ್ಗಿ ಸಾಧನವೊಂದನ್ನು ಬಳಸಿ ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಅಂಗಡಿಯ ಡ್ರಾವರ್ನಲ್ಲಿದ್ದ 10ಲಕ್ಷ ನಗದನ್ನು ದೋಚಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಚಹರೆ ಪತ್ತೆಯಾಗಿದೆ. ಕೇಸು ದಾಖಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.