ಉಡುಪಿ, ಮೇ 16 (Daijiworld News/MSP): ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಲಘು ವಾಹನಗಳಾದ ಮಿನಿ ಬಸ್ಗಳು, ಜೀಪು, ವ್ಯಾನು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ.
ಮೇ 16 ರಂದು ಆಗುಂಬೆ ಘಾಟಿಯಲ್ಲಿ ಮೇ 16ರಿಂದ ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಈ ಹಿಂದೆಯೇ ತಿಳಿಸಿದ್ದರು. ಸಧ್ಯಕ್ಕೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಕಾಂಕ್ರೀಟ್ ಕಾಮಗಾರಿ ಕ್ಯೂರಿಂಗ್ ಆಗಲು 18 ದಿನಗಳ ಅವಶ್ಯಕತೆ ಇರುವುದರಿಂದ ರಸ್ತೆಯ ಕ್ಯೂರಿಂಗ್ ಸಂಪೂರ್ಣವಾಗಿ ಮುಗಿದ ನಂತರ ಅಂದರೆ ಜೂ.1 ರಿಂದ ಎಲ್ಸಿವಿ ವಾಹನಗಳಿಗೆ ಸಂಚಾರ ಮುಕ್ತಗೊಳಿಸಲಾಗುವುದು.
ಅಲ್ಲಿಯವರೆಗೆ ಘನ ವಾಹನಗಳು ಉಡುಪಿ -ಸಿದ್ದಾಪುರ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ಹಾಗೂ ಮಂಗಳೂರು -ಕಾರ್ಕಳ -ಶೃಂಗೇರಿ ಮೂಲಕ ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ .