ಉಡುಪಿ, ಜು. 10(DaijiworldNews/Ak): ಮಾದಕ ವಸ್ತು ಸೇವಿಸಿದ್ದ ಯುವಕನನ್ನು ಉಡುಪಿ ಪೊಲೀಸರು ಜುಲೈ 6ರಂದು ಬಂಧಿಸಿದ್ದಾರೆ.ಆರೋಪಿಯನ್ನು ಮೊಹಮ್ಮದ್ ನೌಫಿಲ್ ಎಂದು ಗುರುತಿಸಲಾಗಿದೆ.
ಪುನೀತ್ ಕುಮಾರ್ ಬಿ ಇ, ಪಿಎಸ್ ಐ ಉಡುಪಿ ನಗರ ಠಾಣೆ ಪೊಲೀಸರು ಮೊಹಮ್ಮದ್ ನೌಫಿಲ್ ಎಂಬಾತನನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆತ ಕುಡಿದ ಅಮಲಿನಲ್ಲಿದ್ದುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ನಂತರ ಆರೋಪಿ ನೌಫಿಲ್ ನನ್ನು ಕೆಎಂಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ನೌಫಿಲ್ ನಿಷೇಧಿತ ಮಾದಕ ವಸ್ತು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.