Karavali
ಮಂಗಳೂರು: ವಿಷನ್ ಕೊಂಕಣಿಯಿಂದ 'ನ್ಯೂ ಇರಾ' ಮ್ಯೂಸಿಕಲ್ ಪ್ರಾಜೆಕ್ಟ್ ಬಿಡುಗಡೆ
- Mon, Jul 08 2024 05:21:03 PM
-
ಮಂಗಳೂರು, ಜು. 08(DaijiworldNews/AA): ದಾಯ್ಜಿವರ್ಲ್ಡ್ ಸಹಯೋಗದಲ್ಲಿ ಮೈಕಲ್ ಡಿಸೋಜಾ ನಿರ್ದೇಶನದ ವಿಷನ್ ಕೊಂಕಣಿಯ ಬಹು ನಿರೀಕ್ಷಿತ ಮ್ಯೂಸಿಕಲ್ ಪ್ರಾಜೆಕ್ಟ್ 'ನ್ಯೂ ಇರಾ' ಜುಲೈ 7 ರ ಭಾನುವಾರ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಎಲ್ಸಿಆರ್ಐ ಬ್ಲಾಕ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.
ಈ ಬಿಡುಗಡೆ ಸಮಾರಂಭದಲ್ಲಿ 12 ಸಾಹಿತಿಗಳು ಬರೆದಿರುವ, 11 ಸಂಗೀತ ಸಂಯೋಜಕರು ಸಂಯೋಜಿಸಿರುವ, 12 ಹೊಸ ಕೊಂಕಣಿ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಈ ಹಾಡುಗಳನ್ನು 15 ಗಾಯಕರು ಹಾಡಿದರು. ಮಂಗಳೂರಿನ ಅರ್ಬನ್ ಗ್ರೋವ್ ನವರು ತಮ್ಮ ಉತ್ತಮ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ತುಂಬಿದರು. ಜೊತೆಗೆ ಕಾರ್ಯಕ್ರಮದಲ್ಲಿ ಕೊಂಕಣಿಯ ಹೆಸರಾಂತ ನಟರಾದ ಮೆಲ್ಲು ವೆಲೆನ್ಸಿಯಾ ಕ್ಲೀಟಸ್ ಲೋಬೋ ಉರ್ವಾ ಅವರು ತಮ್ಮ ಹಾಸ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾದ ವಿವಿಧ ಲೇಖಕರು ಬರೆದ 10 ಕೊಂಕಣಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ವಿಷನ್ ಕೊಂಕಣಿ ಈ ಪುಸ್ತಕಗಳಿಗೆ ಚಾಲನೆ ನೀಡಿದೆ. ದಾಯ್ಜಿವರ್ಲ್ಡ್ ಮೀಡಿಯಾ ಗ್ರೂಪ್ನ ಹೊಸ ಉದ್ಯಮವಾದ 'ದಾಯ್ಜಿವರ್ಲ್ಡ್ ಫಿಲ್ಮ್ಸ್' ಅನ್ನು ಲಾಂಚ್ ಮಾಡಲಾಯಿತು.
ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, "ಮೈಕೆಲ್ ಡಿಸೋಜಾ ಮತ್ತು ಅವರ ವಿಷನ್ ಕೊಂಕಣಿಯು ಕೊಂಕಣಿ ಸಾಹಿತ್ಯ, ಸಂಗೀತ ಮತ್ತು ಮನರಂಜನೆಯ ಹೊಸ ಯುಗಕ್ಕೆ ಅಡಿಪಾಯ ಹಾಕಿ ಕೊಟ್ಟಿದೆ. ಇಂದು 12 ಹಾಡುಗಳು ಮತ್ತು 10 ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ವಿಷನ್ ಕೊಂಕಣಿ ಇತಿಹಾಸ ನಿರ್ಮಿಸಿದೆ. ಮೈಕಲ್ ಡಿಸೋಜಾ ಅವರ ಈ ರೀತಿಯ ಯೋಜನೆಗಳಿಗಾಗಿ ಕೊಂಕಣಿ ಸಮುದಾಯವು ಕೃತಜ್ಞರಾಗಿದೆ. ನಮ್ಮ ದಾಯ್ಜಿವರ್ಲ್ಡ್ ಕುಟುಂಬ ಅವರ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ" ಎಂದರು.
ದಾಯ್ಜಿವರ್ಲ್ಡ್ ತನ್ನ ಹೊಸ ಉದ್ಯಮವಾದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ಸಿದ್ಧವಾಗಿದೆ ಎಂದು ವಾಲ್ಟರ್ ನಂದಳಿಕೆ ಅವರು ಘೋಷಿಸಿದರು. ಈ ವೇಳೆ ಮೈಕೆಲ್ ಡಿಸೋಜಾ ಅವರು ದಾಯ್ಜಿವರ್ಲ್ಡ್ ಫಿಲ್ಮ್ಸ್ ಅಡಿಯಲ್ಲಿ ಮೊದಲ ಚಿತ್ರವನ್ನು ನಿರ್ಮಿಸುವುದಾಗಿ ತಿಳಿಸಿದರು. ಮೊದಲ ಸಿನಿಮಾವನ್ನು ಖ್ಯಾತ ಬರಹಗಾರ ಮತ್ತು ನಿರ್ದೇಶಕ ಸ್ಟ್ಯಾನಿ ಬೇಲಾ ನಿರ್ದೇಶಿಸಲಿದ್ದು, ಸಂಜಯ್ ರೋಡ್ರಿಗಸ್ ಸಂಗೀತ ನಿರ್ದೇಶಕರಾಗಿದ್ದಾರೆ.
'ನ್ಯೂ ಇರಾ' ಕೊಂಕಣಿ ಹಾಡುಗಳ ಪ್ರಾಜೆಕ್ಟ್ ಗೆ ಕೊಡುಗೆ ನೀಡಿದವರನ್ನು ಶ್ಲಾಘಿಸಿದ ಮೈಕೆಲ್ ಡಿಸೋಜಾ ಅವರು, "ಈ ಪ್ರಾಜೆಕ್ಟ್ ಅನ್ನು ಸಮಯಕ್ಕೆ ಸರಿಯಾಗಿ ಮತ್ತು ಪರಿಪೂರ್ಣತೆಯಿಂದ ತಲುಪಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಪ್ರಾಜೆಕ್ಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಲ್ಲಾ ಸಾಹಿತಿಗಳು, ಸಂಯೋಜಕರು ಮತ್ತು ಗಾಯಕರನ್ನು ನಾನು ಅಭಿನಂದಿಸುತ್ತೇನೆ. ಇದು ಕೇವಲ ಆರಂಭವಾಗಿದ್ದು, ಸಂಗೀತ, ಸಾಹಿತ್ಯ ಮತ್ತು ಮನರಂಜನೆಯಲ್ಲಿ ಹೊಸತನ ಮತ್ತು ತಾಜಾತನ ಮುಂದುವರಿಯಬೇಕು. ದಾಯ್ಜಿವರ್ಲ್ಡ್ ನ ಮೊದಲ ಚಲನಚಿತ್ರ ನಿರ್ಮಾಣ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. ಈ ಚಿತ್ರವನ್ನು ಭಾರತದಾದ್ಯಂತ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಪ್ರದರ್ಶಿಸಬೇಕು ಎಂಬುದು ನನ್ನ ಆಶಯವಾಗಿದೆ" ಎಂದು ತಿಳಿಸಿದರು.
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಳ ಶೆಣೈ, "ಕೊಂಕಣಿ ಸಾಹಿತ್ಯಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಮೈಕಲ್ ಡಿಸೋಜ ಅವರಿಗೆ ನಾವು ಚಿರಋಣಿಗಳು. ವಿಷನ್ ಕೊಂಕಣಿ ಮೂಲಕ ಅವರು ಒಂದು ಮಾನದಂಡವನ್ನು ಸ್ಥಾಪಿಸಿ ನಮಗೆ ಮಾದರಿಯಾಗಿದ್ದಾರೆ. ನಮ್ಮ ಮಾತೃಭಾಷೆಯ ಸೇವೆಯಲ್ಲಿ ನಾವು ಮೈಕೆಲ್ ಡಿಸೋಜಾ ಮತ್ತು ವಿಷನ್ ಕೊಂಕಣಿ ಸಹಯೋಗದೊಂದಿಗೆ ಹೆಚ್ಚಿನ ಯೋಜನೆಗಳನ್ನು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.
ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರಾದ ಫಾ.ರಿಚರ್ಡ್ ಕೊಯೆಲ್ಹೋ, ಕೊಂಕಣಿ ನಾಟಕ ಸಭಾದ ಅಧ್ಯಕ್ಷರು; ಫಾ. ರಾಕಿ ಡಿ'ಕುನ್ಹಾ ಒಎಫ್ಎಂ, ರಾಹುಲ್ ಜಾಹೀರಾತುದಾರರ ನಿರ್ದೇಶಕರಾದ ಟೈಟಸ್ ನೊರೊನ್ಹಾ, ಬರಹಗಾರ ಮತ್ತು ವಿಮರ್ಶಕರಾದ ಹೆಚ್ ಎಂ ಪೆರ್ನಾಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಾಯ್ಜಿವರ್ಲ್ಡ್ನ ಕಾರ್ಯಾಚರಣೆಯ ನಿರ್ದೇಶಕರಾದ ಮೆಲ್ವಿನ್ ರೋಡ್ರಿಗಸ್ ಅವರು ದಾಯ್ಜಿವರ್ಲ್ಡ್ ಮತ್ತು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ವಿಷನ್ ಕೊಂಕಣಿಯಿಂದ ಹಾಡುಗಳು ಮತ್ತು ಪುಸ್ತಕಗಳ ಪ್ರಾಜೆಕ್ಟ್ ಗಳ ಅವಲೋಕನವನ್ನು ಒದಗಿಸಿದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಅಲೆಕ್ಸಿಸ್ ಕ್ಯಾಸ್ಟೆಲಿನ್ಹೋ, ಲಾರೆನ್ಸ್ ಡಿಸೋಜಾ, ರೊನಾಲ್ಡ್ ನಜರೆತ್, ಹಾಗೂ ದಾಯ್ಜಿವರ್ಲ್ಡ್ ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತೌರೊ ಅತಿಥಿಗಳನ್ನು ಸ್ವಾಗತಿಸಿದರು.
ಜೆನಿಶಾ ಜೆರ್ನಿಸ್ ಮತ್ತು ರೂಪಲ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜಯ್ ರೋಡ್ರಿಗಸ್ ಈವೆಂಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದರೆ, ಸ್ಟ್ಯಾನಿ ಬೇಲಾ ಅವರು ಕಾರ್ಯಕ್ರಮದ ನಿರ್ದೇಶಕರಾಗಿದ್ದರು.
ಹೊಸ ಹಾಡುಗಳ ಸಾಹಿತಿಗಳು: ತುಕಾರಾಂ ಶೇಟ್ (ಗೋವಾ), ರಿಚರ್ಡ್ ಅಲ್ವಾರೆಸ್, ವಿಲ್ಸನ್ ಕಟೀಲ್, ರೋಶು ಬಜ್ಪೆ, ರಾಬರ್ಟ್ ಫೆರ್ನಾಂಡಿಸ್ (ಉದ್ಯಾವರ), ರುಸ್ಪೇಶ್ ವರಕ್, ಸ್ಟ್ಯಾನಿ ಬೇಲಾ, ಸಂಜಯ್ ಬೋರ್ಕರ್ ಮತ್ತು ರೆಸ್ನಿಶಾ ಲೋಬೋ.
ಸಂಯೋಜಕರು: ಉಸ್ತಾದ್ ರಫೀಕ್ ಖಾನ್, ಕೆಜೆತನ್ ಡಯಾಸ್, ರೋಶನ್ ಡಿಸೋಜಾ (ಏಂಜೆಲೋರ್), ರೋಶನ್ ಕ್ರಾಸ್ತಾ, ಸ್ಟೀವನ್ ಕುಟಿನ್ಹಾ, ಜೋಶಲ್ ಡಿಸೋಜಾ, ಮೆಲ್ವಿನ್ ಲೀಮಾ, ವೆಡ್ಸನ್ ಡಿಸೋಜಾ, ಕೇತನ್ ಕ್ಯಾಸ್ಟಲಿನ್ಹೋ, ಸುಮುಖ್ ಆಚಾರ್ಯ ಮತ್ತು ರಾಯ್ಸ್ಟನ್ ಲೊರೆಟ್ಟೊ.
ಗಾಯಕರು: ಶಿಲ್ಪಾ ಕುಟಿನ್ಹಾ, ಜೀನ ಪೆರೇರಾ, ಜೋಶಲ್ ಡಿಸೋಜಾ, ರವೀಂದ್ರ ಪ್ರಭು, ಕಜೆಟನ್, ಅಶ್ವಿನ್ ಡಿ'ಕೋಸ್ಟಾ, ರೈನೆಲ್ ಸಿಕ್ವೇರಾ, ಜೇಸನ್ ಲೋಬೋ, ಸ್ಟೀಫನ್ ಡಿ'ಕುನ್ಹಾ, ಡೀಲ್ಲೆ ಡಿ'ಸೋಜಾ, ಅಕ್ಷಯ್ ನಾಯ್ಕ್, ಸೋನಾಲ್ ಮೊಟೆರೊ, ಕ್ಲಿಯೋನ್ ಡಿಸಿಲ್ವಾ ಮತ್ತು ಕರೆನ್ ಕ್ರಾಸ್ತಾ
ಹೊಸದಾಗಿ ಬಿಡುಗಡೆಯಾದ ಪುಸ್ತಕಗಳ ಲೇಖಕರು: ವಲೇರಿಯನ್ ಸಿಕ್ವೇರಾ (ವಲ್ಲಿ ಬೋಲಾ), ಜೋಸೆಫ್ ಡಿ'ಮೆಲ್ಲೋ (ಸುನಂದ್), ಜೆ ಎಫ್ ಡಿಸೋಜಾ (ಅತ್ತಾವರ), ಫೆಲ್ಸಿ ಲೋಬೋ (ದೇರೆಬೈಲ್), ಡಾ ಸುಸ್ಮಾ ಅಶೋಕ್ ಆರೂರ್, ರೋಶನ್ ಸಿಕ್ವೇರಾ (ರೋಶು ಬಜ್ಪೆ), ವಿನ್ಸೆಂಟ್ ಪಿಂಟೋ (ಏಂಜೆಲೋರ್), ಸಂಜಯ್ ಬೋರ್ಕರ್ (ಗೋವಾ), ಫ್ಲಾಯ್ಡ್ ನಿರ್ಕನ್ ಮತ್ತು ಗ್ಲಾನಿಶ್ ಮಾರ್ಟಿಸ್