ಮಂಗಳೂರು,ಜು.08(DaijiworldNews/AK): ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊಬೈಲ್ ಟವರ್ಗಳ ಬ್ಯಾಟರಿ ಮತ್ತು ಕಾಂಪೌಂಡ್ ಗೇಟ್ಗಳನ್ನು ಕದ್ದ ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಇಟ್ಟಿ ಪಣಿಕ್ಕರ್ (58) ಈಗ ಪೊಲೀಸ್ ವಶದಲ್ಲಿರುವ ಆರೋಪಿ. 2.56 ಲಕ್ಷ ಮೌಲ್ಯದ 39 ಬ್ಯಾಟರಿಗಳು, 52000 ರೂಪಾಯಿ ಮೌಲ್ಯದ ಮೂರು ಕಬ್ಬಿಣದ ಗೇಟ್ಗಳು ಮತ್ತು ಐದು ಲಕ್ಷ ರೂಪಾಯಿ ಮೌಲ್ಯದ ಪಿಕ್ ಅಪ್ ಗೂಡ್ಸ್ ಟೆಂಪೋ ಸೇರಿದಂತೆ 8.08 ಲಕ್ಷ ಮೌಲ್ಯದ ಸರಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಪಿ ಮನೋಜ್ ಕುಮಾರ್, ಮೂಲ್ಕಿ ಠಾಣೆ ಇನ್ಸ್ಪೆಕ್ಟರ್ ವಿದ್ಯಾಧರ್ ಡಿ.ಬೈಕೇರಿಕರ್, ಪಿಎಸ್ಐ ವಿನಾಯಕ ಬಾವಿಕಟ್ಟಿ, ಎಎಸ್ಐ ಸಂಜೀವ ಎ.ಪಿ, ಎಚ್.ಸಿ.ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವೀರೇಶ, ಕಾನ್ಸ್ಟೆಬಲ್ಗಳಾದ ಅರುಣ್ ಕುಮಾರ್, ಸುನೀಲ್, ಚಿತ್ರಾ ಪಾಲ್ಗೊಂಡಿದ್ದರು.