ವಿಟ್ಲ, ಜು. 07(DaijiworldNews/AA): ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಪೇಟೆಯಿಂದ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯ ತಿರುವಿನಲ್ಲಿ ನಡೆದಿದೆ.
ಬುಳೇರಿಕಟ್ಟೆ ಕಡೆಯಿಂದ ಕಾಸರಗೋಡು ರಸ್ತೆಯ ಮೂಲಕ ವಿಟ್ಲ ಪೇಟೆಗೆ ಬರುತ್ತಿರುವ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಪೇಟೆಯ ಕಡೆಗೆ ಆಗಮಿಸುತ್ತಿದ್ದ ಕಾರು ಪೆಟ್ರೋಲ್ ಪಂಪ್ ವೊಂದರ ಸಮೀಪದಲ್ಲಿನ ರಸ್ತೆಯ ತಿರುವಿನಲ್ಲಿ ಚರಂಡಿಗೆ ಬಿದ್ದಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.