ಮಂಗಳೂರು, ಮೇ15(Daijiworld News/SS): ಮಂಗಳೂರಿನ ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದ್ದು, ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆಹರಿಯಲು ದೇವರು ಅನುಗ್ರಹಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಕಂಕನಾಡಿಯಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಶಾಸಕರೊಂದಿಗೆ ಕ್ಷೇತ್ರದ ಅಧ್ಯಕ್ಷ ಕೇಶವ ಅಂಗಡಿಮಾರ್, ಪ್ರಮುಖರಾದ ಕೆ ಚಿತ್ತರಂಜನ್, ಜೆ. ಕಿಶೋರ್ ಕುಮಾರ್, ಸುರೇಂದ್ರನಾಥ, ಉಮೇಶ್ ಸಾಲ್ಯಾನ್, ಬಿ. ವಿಠಲ, ಪಾಲಿಕೆ ಮಾಜಿ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್ ಶೆಟ್ಟಿ, ಸುರೇಂದ್ರ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಪ್ರಭಾಮಾಲಿನಿ, ರಮೇಶ್ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ಸಂದೀಪ್ ಎಕ್ಕೂರು, ಸುರೇಶ್ ನಾಯಕ್, ಸಂದೀಪ್ ಗರೋಡಿ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.