ಬಂಟ್ವಾಳ, ಜು.07(DaijiworldNews/AK): ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿ ಭಾಗವಾದ ಬೆಂಚಿನಡ್ಕ-ಕಾಜಾಳ ನಡುವಿನ ಚಿಕ್ಕ ನದಿಗೆ ನಿರ್ಮಿಸಲಾಗಿರುವ ಸೇತುವೆಯೂ ಸಹ ಆಗಿರುವ ಹಿನ್ನೆಲೆಯಲ್ಲಿ ಜನರು ಮೃತ ವೃದ್ಧೆಯ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಮೇಲೆ ಯಾವುದೇ ಲಘು ವಾಹನ ಸಾಧ್ಯವಾಗದಷ್ಟು ಕಿರಿದಾದ ಸೇತುವೆ ಇದಾಗಿದೆ.
ಬೆಳ್ತಂಗಡಿಯ ಮಾಲಾಡಿ ಗ್ರಾಮದ ಕಾಜಾಲ ಮತ್ತು ಬಂಟ್ವಾಳದ ಪಿಲಾತಬೆಟ್ಟು ಗ್ರಾಮದ ನಯನಾಡು, ಬೆಂಚಿನಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಸಣ್ಣ ತೊರೆ ಹರಿಯುತ್ತದೆ. ಕನಿಷ್ಠ ಲಘು ವಾಹನಗಳಿಗಾದರೂ ಸಂಚರಿಸಲು ಅನುಕೂಲವಾಗುವಷ್ಟು ಅಗಲವಾದ ಕಿರು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈವರೆಗೆ ನನೆಗುದಿಗೆ ಬಿದ್ದಿದೆ.