ಮಂಗಳೂರು, ಜು.06(DaijiworldNews/AA): ನಗರದ ಕೊಡಿಯಾಲ್ ಬೈಲ್ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯು ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಎಪಿಸೀಲರ್ ಮೊಣಕಾಲು ಇಂಪ್ಲಾಂಟ್ ಚಿಕಿತ್ಸೆ ಮಾಡಿರುವುದನ್ನು ಘೋಷಿಸಲು ಹೆಮ್ಮೆಪಡುತ್ತದೆ. ಇದನ್ನು ಜೂನ್ 30, 2024 ರಂದು ನಡೆಸಲಾಯಿತು. ಈ ಅದ್ಭುತ ಶಸ್ತ್ರಚಿಕಿತ್ಸೆಯನ್ನು ಪ್ರಮಾಣೀಕೃತ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ಆರ್ತ್ರೋಸ್ಕೋಪಿ ಶಸ್ತ್ರಚಿಕಿತ್ಸಕ ಡಾ. ದೀಪಕ್ ರೈ ಅವರು ಸ್ಟಾಕ್ ಹೋಮ್ನ ಕ್ಯಾರೋಲಿನ್ ಸ್ಕಾ ಇನ್ ಸ್ಟಿಟ್ಯೂಟ್ನ ಮಾಜಿ ಪ್ರಾಧ್ಯಾಪಕ ಮತ್ತು ಎಪಿಸರ್ಫ್ ಮೆಡಿಕಲ್ ಎಬಿ ಸಂಸ್ಥೆಯ ಸಂಸ್ಥಾಪಕ ಪ್ರೊಫೆಸರ್ ಲೈಫ್ ರೈಡ್ ಜೊತೆಗೆ ನಡೆಸಿದರು. ಆಸ್ಪತ್ರೆಯ ಮುಖ್ಯ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ಆರ್ತ್ರೋಸ್ಕೋಪಿ ಸರ್ಜನ್ ಡಾ. ದೀಪಕ್ ರೈ ಮತ್ತು ಎಪಿಸರ್ಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮೋಹನ್ ನಾಯರ್ ಅವರು ಮೂಳೆ ಶಸ್ತ್ರಚಿಕಿತ್ಸೆಯಲ್ಲಿನ ಈ ಮಹತ್ವದ ಪ್ರಗತಿಯ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು.
ಸಾಮಾನ್ಯ ಮೊಣಕಾಲಿನ ಅಂಗರಚನೆ: ಮೊಣಕಾಲು ಕೀಲು ದೇಹದಲ್ಲಿನ ಅತಿದೊಡ್ಡ ಜಂಟಿಯಾಗಿದ್ದು, ಫೀಮರ್ (ತೊಡೆಯ ಮೂಳೆ), ಟಿಬಿಯಾ (ಮೊಣಕಾಲಿನ ಕೆಳಗಿನ ಮುಂಭಾಗದ ಏಲುಬು) ಮತ್ತು ಪಟೆಲ್ಲಾ (ಮಂಡಿಚಿಪ್ಪು) ಅನ್ನು ಜೋಡಿಸುತ್ತದೆ. ಇದು ಭಾರ ಹೊರುವ ಜಂಟಿಯಾಗಿದ್ದು ಕಾಲು ಚಲಿಸಲು ಮತ್ತು ಬಾಗಲು ಸಹಾಯ ಮಾಡುತ್ತದೆ. ಮೂಳೆಗಳು ಸಂಧಿಸುವ ಮೇಲ್ಮೀಯನ್ನು ಕಾರ್ಟಿಲೆಜ್ ಆವರಿಸುತ್ತದೆ. ಇದು ಸ್ಪಂಜಿನಂತ ವಸ್ತುವಾಗಿದ್ದು ಶಾಕ್ ಅಬ್ಲಾರ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ. ಜಂಟಿ ದ್ರವ ಕಾರ್ಟಿಲೆಜ್ ಅನ್ನು ನಯಗೊಳಿಸುತ್ತದೆ. ಜಂಟಿಯಲ್ಲಿ ಘರ್ಷಣೆಯನ್ನು ತಡೆಯುತ್ತದೆ.
ಹೊಸ ಪರಿಹಾರ: ಎಪಿಸೀಲರ್ ನೊಂದಿಗೆ ಜಾಯಿಂಟ್ ರಿಸರ್ಫೇಸಿಂಗ್: ಎಪಿಸೀಲರ್ ಎನ್ನುವುದು ಫೋಕಲ್ ಆಸ್ಟಿಯೊಕೊಂಡ್ರಲ್ ದೋಷಗಳು ಮತ್ತು ಆರಂಭಿಕ ಅಸ್ಥಿಸಂಧಿವಾತದ ಗಾಯಗಳ ಚಿಕಿತ್ಸೆಗಾಗಿ ವಿನ್ಯಾಸಗೊಳಿಸಲಾದ ವೈಯಕೀಕೃತ ಇಂಪ್ಲಾಂಟ್ ಆಗಿದೆ. ಜಂಟಿ ಮೇಲ್ಮಯ ಪೀಡಿತ ಪ್ರದೇಶವನ್ನು ಬದಲಿಸಲು ಎಪಿಸರ್ಫ್ ಮೆಡಿಕಲ್ ಈ ವೈಯಕ್ತಿಕರಿಸಿದ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದೆ. ಮೊಣಕಾಲಿನ ಕಾರ್ಯವನ್ನು ಪುನಃಸ್ಥಾಪಿಸುವುದು, ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು ಮತ್ತು ಜಂಟಿ ಬದಲಿ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ವಿಳಂಬಗೊಳಿಸುವುದು ಅಥವಾ ತಡೆಯುವುದು, ಈ ಶಸ್ತ್ರಚಿಕಿತ್ಸಾ ವಿಧಾನದ ಗುರಿಯಾಗಿದೆ.
ಎಪಿಸೀಲರ್ ಮೊಣಕಾಲು ಇಂಪ್ಲಾಂಟ್ನ ವೈಯಕ್ತಿಕೃತ ವಿನ್ಯಾಸವನ್ನು ಎಂಆರ್ಐ ಚಿತ್ರಣವನ್ನು ಆದರಿಸಿ ಮಾಡಲಾಗುತ್ತದೆ. ಈ ಚಿತ್ರಣದಿಂದ ಪಡೆದ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವುದರ ಮೂಲಕ, ಮೊಣಕಾಲಿನ ಮೇಲೆಯ ವಾಸ್ತವವಾದ 3ಡಿ ಮಾದರಿಯನ್ನು ರಚಿಸಲಾಗುತ್ತದೆ ಮತ್ತು ಹಾನಿಗೊಳಗಾದ ಭಾಗವನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ. ನಂತರ ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಮತ್ತು ಸಂಪೂರ್ಣವಾಗಿ ಹೊಂದಿಕೊಳ್ಳುವ ಇಂಪ್ಲಾಂಟ್ ನೊಂದಿಗೆ ಪ್ರದೇಶವನ್ನು ಪುನಃಸ್ಥಾಪಿಸಲು ಎಪಿಸೀಲರ್ ಮತ್ತು ಚಿಕಿತ್ಸೆಗೆ ಬೇಕಾಗುವ ಉಪಕರಣಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಎಪಿಗೈಡ್ ಅನ್ನು ಬಳಸುವುದರ ಮೂಲಕ ಇಂಪ್ಲಾಂಟ್ ಅನ್ನು ಅತ್ಯುತ್ತಮವಾಗಿ ಇರಿಸಲು ಶಸ್ತ್ರಚಿಕಿತ್ಸಾ ವಿಧಾನವನ್ನು ಸೂಕ್ಷ್ಮಗೊಳಿಸುತ್ತದೆ.
ಎಪಿಸೀಲರ್ ಕೋಬಾಲ್ಟ್-ಕ್ರೋಮ್ ಮಿಶ್ರಲೋಹದಿಂದ ಮಾಡಲಾಗುತ್ತದೆ. ಮೂಳೆ ಮತ್ತು ಕಾರ್ಟಿಲೆಜ್ನಲ್ಲಿ ಮುಳುಗಿರುವ ಎಪಿಸೀಲರ್ನ ಭಾಗವು ಟೈಟಾನಿಯಂ ಒಳಲೇಪ ಮತ್ತು ಹೈಡ್ರಾಕ್ಸಿ ಅಪಟೈಟ್ ಹೊರ ಲೇಪನವನ್ನು ಹೊಂದಿರುತ್ತದೆ. ಇದು ಮೂಳೆಗೆ ತ್ವರಿತ ಮತ್ತು ಶಾಶ್ವತವಾದ ಸ್ಥಿರೀಕರಣವನ್ನು ನೀಡುತ್ತದೆ.
ಎಪಿಸರ್ಫ್ ಮೆಡಿಕಲ್ ಬಗ್ಗೆ: ಎಪಿಸರ್ಫ್ ಮೆಡಿಕಲ್ ನೋವಿನ ಜಂಟಿ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಕಡಿಮೆ ಗಾಯದ ಮತ್ತು ವೈಯಕ್ತಿಕರಿಸಲ್ಪಡುವ ಚಿಕಿತ್ಸಾ ಆಯ್ಕೆಗಳ ಮೂಲಕ ಹೆಚ್ಚು ಸಕ್ರಿಯ ಮತ್ತು ಆರೋಗ್ಯಕರ ಜೀವನವನ್ನು ಒದಗಿಸಲು ಭದ್ದವಾಗಿದೆ. ಕೀಲುಗಳಲ್ಲಿನ ಸ್ಥಳೀಯ ಕಾರ್ಟಿಲೆಜ್ ಗಾಯಗಳಿಗೆ ಚಿಕಿತ್ಸೆ ನೀಡಲು ಎಪಿಸರ್ಫ್ ಮೆಡಿಕಲ್ನ ಎಪಿಸೀಲರ್ ವೈಯಕೀಕೃತ ಇಂಪ್ಲಾಂಟ್ಗಳು ಮತ್ತು ಎಪಿಗೈಡ್ ಸರ್ಜಿಕಲ್ ಡ್ರಿಲ್ ಗೈಡ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಪಿಸರ್ಫ್ ಮೆಡಿಕಲ್ನ ಯುಫಿಡೆಲಿಟಿ® (uiFidelity) ವ್ಯವಸ್ಥೆಯು ಇಂಪ್ಲಾಂಟ್ಗಳನ್ನು ಪ್ರತಿ ವ್ಯಕ್ತಿಯ ವಿಶಿಷ್ಟ ಗಾಯಕ್ಕೆ ಸೂಕ್ತವಾದ ಫಿಟ್ ಮತ್ತು ಕನಿಷ್ಠ ಹಸ್ತಕ್ಷೇಪಕ್ಕೆ ಪರಿಣಾಮಕಾರಿಯಾಗಿ ಹಾಗು ಕಡಿಮೆ ದುಬಾರಿಯಾಗಿ ಹೊಂದಿಸಲು ಅನುವು ಮಾಡಿಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ www.episurf.com ಹಾಗೂ www.yenepoyahospital.com ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.