ಉಡುಪಿ, ಮೇ15(Daijiworld News/SS): ಆಳ ಸಮುದ್ರಕ್ಕೆ ಮೀನುಗಾರಿಕೆಗೆಂದು ತೆರಳಿ ಅವಘಡಕ್ಕೆ ಸಿಲುಕಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ನಲ್ಲಿದ್ದ ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಹಾಗೂ ಬೋಟ್ ಅವಘಡಕ್ಕೆ ಕಾರಣವೇನು ಎನ್ನುವ ಬಗ್ಗೆ ಚರ್ಚಿಸುವ ಸಲುವಾಗಿ ಮೇ 16 ರಂದು ಮೀನುಗಾರರ ನಿಯೋಗ ಕೇಂದ್ರ ರಕ್ಷಣಾ ಸಚಿವೆಯನ್ನು ಭೇಟಿಯಾಗಲು ಹೊಸದಿಲ್ಲಿಗೆ ತೆರಳಿಲಿದೆ.
ಮೀನುಗಾರರ ನಿಯೋಗ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿ ನ್ಯಾಯ ನೀಡುವಂತೆ ಆಗ್ರಹಿಸುತ್ತೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ರಾಜ್ಯ ಸರಕಾರ ನಾಪತ್ತೆಯಾದ 7 ಮಂದಿ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನಂತೆ ಬಿಡುಗಡೆ ಮಾಡಿದ ಪರಿಹಾರ ನಿಧಿ ಪಡೆಯುವ ಅಂಗವಾಗಿ ಕರಾರು ಒಪ್ಪಂದಕ್ಕೆ ನಾಪತ್ತೆಯಾದ ಮೀನುಗಾರರಾದ ಚಂದ್ರಶೇಖರ್ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಮನೆಯವರು ಮಂಗಳವಾರ ಸಹಿ ಹಾಕಿರುವ ಬಗ್ಗೆ ಮೂಲಗಳು ತಿಳಿಸಿವೆ.