ಸುಳ್ಯ, ಜು.02(DaijiworldNews/AK): ಸುಳ್ಯ ವಿಧಾನಸಭಾ ಕ್ಷೇತ್ರದ ಪೆರುವಾಜೆ ಮತ್ತು ಕೊಡಿಯಾಲ ಗ್ರಾಮಗಳ ನಡುವೆ ಇರುವ ಕಿಂಡಿ ಆನೆಕಟ್ಟು (ಅಣೆಕಟ್ಟು) ಸುಮಾರು 60ಕ್ಕೂ ಹೆಚ್ಚು ವಸತಿ ಗೃಹಗಳಿಗೆ ಸಂಪರ್ಕ ಕಲ್ಪಿಸಿದ್ದರೂ ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು, ಸ್ಥಳೀಯರ ಸುರಕ್ಷತೆಗೆ ಆತಂಕ ತಂದೊಡ್ಡಿದೆ.
ಹದಗೆಡುತ್ತಿರುವ ಅಣೆಕಟ್ಟು ತುಂಬಿ ಹರಿಯುವ ನದಿಯ ಮೇಲೆ ನೆಲೆಸಿದ್ದು, ಈ ಬಾರಿಯ ಮಳೆಗಾಲದಲ್ಲಿ ನದಿಯು ಅಣೆಕಟ್ಟಿಗೆ ಅಪಾಯವನ್ನುಂಟು ಮಾಡುತ್ತಿದೆ, ಇದು ಯಾವುದೇ ಸಮಯದಲ್ಲಿ ಕುಸಿಯುವ ಹಂತದಲ್ಲಿದೆ. ಕಾಂಕ್ರೀಟ್ ಸ್ಲ್ಯಾಬ್ ಒಡೆದು ಹೋಗಿದ್ದು, ಅಣೆಕಟ್ಟಿನ ಮೇಲೆ ನದಿ ದಾಟಲು ಗ್ರಾಮಸ್ಥರು ಅಡಿಕೆ ಮರವನ್ನು ತಾತ್ಕಾಲಿಕ ಸೇತುವೆಯಾಗಿ ಬಳಸುತ್ತಿದ್ದಾರೆ.
45 ವರ್ಷಗಳಷ್ಟು ಹಳೆಯದಾದ ಚಿಕ್ಕ ಅಣೆಕಟ್ಟು ಕಳೆದ ಮೂರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಈ ಕುರಿತು ಬೇಡಿಕೆಗಳಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಜನರಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ.
60ಕ್ಕೂ ಹೆಚ್ಚು ಮನೆಗಳು ವಾಸಕ್ಕೆ ತೆರಳಲು ಈ ಅಣೆಕಟ್ಟೆ ಮಾರ್ಗವನ್ನೇ ಅವಲಂಬಿಸಿದ್ದು, ಮಕ್ಕಳು, ವೃದ್ಧರು ಅಣೆಕಟ್ಟು ದಾಟಿ ಅಡಿಕೆ ಮರದ ಮೇಲೆ ನಡೆದುಕೊಂಡು ನದಿ ದಾಟಬೇಕು. ಅಣೆಕಟ್ಟಿನ ಎರಡೂ ಬದಿಯಲ್ಲಿ ರಕ್ಷಣಾ ಗೋಡೆ ಇಲ್ಲಿದಿರುವುದು ಎದ್ದು ಕಾಣುತ್ತಿದೆ.
ಸ್ಥಳೀಯ ನಿವಾಸಿ ವನಿತಾ ಮಾತನಾಡಿ, ಸೇತುವೆ ದುರಸ್ತಿಗೊಳಿಸುವುದು ಕಳೆದ ಮೂರು ವರ್ಷಗಳಿಂದ ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ. ಜುಲೈ 1ರಂದು ಶಾಸಕರು ಭೇಟಿ ನೀಡಿ ನೂತನ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ್ದರು. ಸದ್ಯಕ್ಕೆ ತಾತ್ಕಾಲಿಕ ಪರಿಹಾರಕ್ಕೆ ಕಾಂಕ್ರೀಟ್ ಹಾಕಿದ್ದು, ಈ ಮಾನ್ಸೂನ್ ಎಷ್ಟು ದಿನ ಬಾಳಿಕೆ ಬರಲಿದೆ ಎಂಬುದು ಖಚಿತವಾಗಿಲ್ಲ.
ಅಡಿಕೆ ಮರದ ಕಾಂಡಗಳನ್ನು ಬಳಸಿ ನೇತಾಡುವ ಸೇತುವೆ:
ಅರಂತೋಡು–ಪಿಂಡಿಮನೆ ಮಿತ್ತಡ್ಕ ರಸ್ತೆಯ ಬಳಿ ಇರುವ ಬಲ್ನಾಡು ನದಿಗೆ ಸಂಪರ್ಕ ಸೇತುವೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.100 ಕ್ಕೂ ಹೆಚ್ಚು ಕುಟುಂಬಗಳು ಸರಿಯಾದ ರಸ್ತೆ ಅಥವಾ ಸಂಪರ್ಕ ಸೇತುವೆಯಿಲ್ಲದೆ ತಮ್ಮ ಮನೆಗಳಿಗೆ ಹೋಗಲು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಅಡಿಕೆ ಮರದ ಕಾಂಡಗಳನ್ನು ಬಳಸಿ ನೇತಾಡುವ ಸೇತುವೆಯನ್ನು ನಿರ್ಮಿಸಿದ್ದಾರೆ, ಅದು ಅಸುರಕ್ಷಿತವಾಗಿದೆ. ಈ ತೂಗು ಸೇತುವೆಯನ್ನು ಬಳಸುವುದನ್ನು ಬಿಟ್ಟರೆ, ಸ್ಥಳೀಯರು ಹೆಚ್ಚುವರಿಯಾಗಿ 15 ಕಿಲೋಮೀಟರ್ ಪ್ರಯಾಣಿಸಬೇಕು ಅನ್ನುವುದು ಸ್ಥಳೀಯರ ಒತ್ತಾಯ.