ಕಾಸರಗೋಡು, ಜೂ 28 (DaijiworldNews/ AK): ಸ್ನೇಹಿತನಿಗೆ ಮೊಬೈಲ್ ಸಂದೇಶ ಕಳುಹಿಸಿ ವ್ಯಕ್ತಿ ಯೋರ್ವ ನದಿಗೆ ಹಾರಿದ ಘಟನೆ ಗುರುವಾರ ಸಂಜೆ ನಡೆದಿದೆ.
ರಾವೇಣೇಶ್ವರ ಮೊಕೋಡ್ ನ ಆಜೇಶ್ ಪಾಲಕ್ಕಾಲ್ (35) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.ಮೃತದೇಹ ಇಂದು ಬೆಳಿಗ್ಗೆ ಚೆಂಬರಿಕ. ಕಲ್ಲುವಲಪ್ಪಿನ ಕಡಲ ಕಿನಾರೆ ಯಲ್ಲಿ ಪತ್ತೆ ಯಾಗಿದೆ.
ಮೂಕೋಡ್ ಕಲಾರಿಕ್ಕಾಲ್ ನಲ್ಲಿ ಪಾಲಕ್ಕಾಲ್ ಟ್ರೇಡರ್ಸ್ ಸಂಸ್ಥೆ ನಡೆಸುತ್ತಿದ್ದರು. ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಚಂದ್ರಗಿರಿ ಹೊಳೆಯ ಸಮೀಪ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಇಟ್ಟು ಬಳಿಕ ಹೊಳೆಗೆ ಹಾರಿದ್ದು, ಪರಿಸರ ವಾಸಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು , ಪೊಲೀಸರು ಶೋಧ ನಡೆಸಿದ್ದರು. ನದಿ ಉಕ್ಕಿ ಹರಿಯುತ್ತಿರುವುದರಿಂದ ಶೋಧ ಕಾರ್ಯ ಕ್ಕೂ ಅಡ್ಡಿ ಯಾಗಿತ್ತು.
ಈ ನಡುವೆ ಇಂದು ಬೆಳಿಗ್ಗೆ ಚೆಂಬರಿಕ ಕಿನಾರೆಯಲ್ಲಿ ಮೃತ ದೇಹ ಪತ್ತೆ ಯಾಗಿದೆ.ಮೃತದೇಹ ವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ನದಿಗೆ ಹಾರುವ ಮೊದಲು ಸ್ನೇಹಿತನ ಮೊಬೈಲ್ ಗೆ ತಾನು ಚಂದ್ರಗಿರಿ ನದಿಗೆ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ನೀಡಲಾಗಿದೆ.