ಬಂಟ್ವಾಳ, ಜೂ 27 (DaijiworldNews/MS): ಬೆಂಗಳೂರು ಭಾಗದಿಂದ ಆಗಮಿಸುವ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿಯಿಂದ ಸರಪಾಡಿ ಮಣಿಹಳ್ಳ ರಸ್ತೆಯಲ್ಲಿ ಆಗಮಿಸಿ, ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ.
ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ,ಉಪ್ಪಿನಂಗಡಿಯಲ್ಲಿ ಮಂಗಳೂರು ತೆರಳಲು ಚಾಲಕ ಗೂಗಲ್ ಮ್ಯಾಪ್ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ,ಮಂಗಳೂರಿಗೆ ತೆರಳಲು ಸೂಚಿಸಿದೆ.
ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮ್ಯಾಪ್ ಈ ರಸ್ತೆಯನ್ನು ಸೂಚಿಸುತ್ತಿದೆ.ಆದರೆ ಈ ರಸ್ತೆಯು ಘನವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ. ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದು ಕೊಳ್ಳುವುದಿಲ್ಲ.ಎರಡು ಮೂರು ಬಾರಿ ಹಿಂದೆ ಮುಂದೆ ಚಲಿಸಿ ತಿರುಗಿಸಬೇಕಿದೆ.ಪ್ರಸ್ತುತ ಈ ಲಾರಿಯು ಮುಂದೆ ಹೋಗಿದ್ದು,ಆದರೆ ಹಿಂದೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸರಪಾಡಿ ಬಿ.ಸಿರೋಡು ಸಂಚರಿಸುವ ಬಸ್ ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದ್ದು, ಈಗಾಗಿ ಸರಪಾಡಿ ಮಣಿನಾಲ್ಕೂರು ಗ್ರಾಮದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು.