ಮಡಂತ್ಯಾರ್, ಜೂ.26(DaijiworldNews/AA): ಸೇಕ್ರೆಡ್ ಹಾರ್ಟ್ ಆಂಗ್ಲ ಮಾದ್ಯಮ ಶಾಲೆ, ಮಡಂತ್ಯಾರ್ ಇಲ್ಲಿನ 9ನೇ ತರಗತಿ ವಿದ್ಯಾರ್ಥಿ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಅಂತರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಾರೆಂಕಿಯ ಫ್ರಾನ್ಸಿಸ್ ಮತ್ತು ಡಯನಾ ಮಿಸ್ಕಿತ್ ರವರ ಪುತ್ರ, ಡೆಪ್ನಿ ಮಿಸ್ಕೀತ್ ರವರ ತಮ್ಮ, ಫ್ಲಾಯ್ಡ್ ಅವರು ಅಂತರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಭಾರತೀಯ ಟಾರ್ಗೆಟ್ ಬಾಲ್ ಏಸೋಸಿಯೇಶನ್ (ರಿ) ಇವರ ವತಿಯಿಂದ ರಾಜಸ್ತಾನದ ಅಲ್ವಾರ್ನಲ್ಲಿ, ರಾಷ್ಟ್ರ ಮಟ್ಟದಲ್ಲಿ ನಡೆದ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಫ್ಲಾಯ್ಡ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಅವರು ಜುಲೈ 8 ರಿಂದ 11 ರವರೆಗೆ ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ ಸೌತ್ ಏಷ್ಯಾ ಟಾರ್ಗೆಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಶಾಲಾ ದೈಹಿಕ ಶಿಕ್ಷಕರಾದ ಮಂಜುನಾಥ್ ಅವರು ಫ್ಲಾಯ್ಡ್ ಅವರ ತರಬೇತುದಾರರಾಗಿರುತ್ತಾರೆ. ಇನ್ನು ಫ್ಲಾಯ್ಡ್ ರವರ ಮುಂದಿನ ಜೀವನ ಯಶಸ್ವಿಯಾಗಲಿ. ವಿಶ್ವ ಮಟ್ಟದಲ್ಲಿ ಗುರುತಿಸಿ ನಮ್ಮ ಊರಿನ ಹೆಸರನ್ನು ಕೀರ್ತಿ ಪತಾಕೆಗೆ ಏರಿಸುವಂತಾಗಲಿ ಎಂದು ಮಡಂತ್ಯಾರು ಚರ್ಚ್ ಧರ್ಮಗುರುಗಳು ಹಾಗೂ ಸಮಸ್ತ ಜನತೆ ಶುಭ ಹಾರೈಸಿದ್ದಾರೆ.