ಉಳ್ಳಾಲ, ಜೂ 26 (DaijiworldNews/MS): ಬೋಳಿಯಾರು ಚೂರಿ ಇರಿತ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಎಸ್ ಡಿ ಪಿ ಐ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿತು.
ಪೊಲೀಸ್ ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಬರುವಂತೆ ಪ್ರತಿಭಟನಾಕಾರರ ಒತ್ತಾಯ ಹಿನ್ನೆಲೆಯಲ್ಲಿ ಎರಡು ಗಂಟೆ ಕಾಲ ದೀರ್ಘಕಾಲ ಮುಂದುವರಿಯಿತು. ಪೊಲೀಸ್ ಕಮೀಷನರ್ ಬರುವವರೆಗೂ ಕದಲಲ್ಲ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬು ಮಾತನಾಡಿ , ಮಂಗಳೂರು ಕಮಿಷನರ್ ಸ್ಪಷ್ಟವಾಗಿ ಹೇಳಿದ್ರು ಬೋಳಿಯಾರ್ ಘಟನೆಗೆ ಬಿಜೆಪಿ ಹಾಗು ಸಂಘ ಪರಿವಾರ ಕಾರಣ ಎಂದು, ಅಷ್ಟು ಸ್ಪಷ್ಟವಾಗಿ ಮಾಧ್ಯಮದ ಮುಂದೆ ಉತ್ತರ ನೀಡಿದವರು ಅದೇ ರಾತ್ರಿ ಮುಸಲ್ಮಾನರ ಮನೆಗೆ ದಾಳಿ ಮಾಡಿದ್ದಾರೆ. ಬೋಳಿಯಾರ್ ಘಟನೆ ಪೊಲೀಸ್ ಇಲಾಖೆ ಎಡವಟ್ಟಿನ ಕಾರಣಕ್ಕೆ ಆಗಿದೆ . ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದ ಶಾಸಕ ಹರೀಶ್ ಪೂಂಜನನ್ನ ಬಂಧಿಸಲು ಪೊಲೀಸರಿಗೆ ಧಮ್ಮಿಲ್ಲ . ಸ್ಪೀಕರ್ ವಿರುದ್ಧ ಹೇಳಿಕೆ ನೀಡಿದ ಸಂಘ ಪರಿವಾರದ ನಾಯಕನನ್ನ ಬಂಧಿಸಲು ಆಗಲಿಲ್ಲ . ಹರೀಶ್ ಪೂಂಜನನ್ನು ವಶಕ್ಕೆ ಪಡೆಯಲು ಹೋದಾಗ ತಡೆಯಲು ಬಂದ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿತ್ತು . ೮೦ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿದೆ . ಪೊಲೀಸ್ ಇಲಾಖೆ ಇವರಿಗೆ ಭಯದಲ್ಲಿ ನೋಟಿಸ್ ನೀಡಿದ್ದಾರೆ . ಅವರು ನಿಗದಿ ಪಡಿಸಿದ ಜಾಗಕ್ಕೆ ಹೋಗಿ ನೋಟಿಸ್ ಕೊಟ್ಟಿದ್ದಾರೆ .
ಪೊಲೀಸರು ಭಯದಿಂದಲೇ ನೋಟಿಸ್ ನೀಡುವಂತೆ ಮಾಡಿದವರು ಯಾರು? ಹರೀಶ್ ಪೂಂಜನನ್ನ ಬಂಧಿಸಲು ಹೋದಾಗ ಗೃಹ ಸಚಿವ ಪರಮೇಶ್ವರ್ ಗೆ ಅತೀ ಹೆಚ್ಚು ಕಾಲ್ ಮಾಡಿದ ಕಾಂಗ್ರೆಸ್ ನಾಯಕ ಯಾರು?. ಪುತ್ತೂರು ಶಾಸಕ ಅಶೋಕ್ ರೈ ಅಥವಾ ಸ್ಪೀಕರ್ ಯು ಟಿ ಖಾದರ್?. ಯುಟಿ ಖಾದರ್ ರವರ ತಂದೆಗೆ ಗೌರವ ನೀಡಿ ಇಲ್ಲಿ ಬಿಜೆಪಿ ಬರಬಾರದೆಂದು ಜನರು ಗೆಲ್ಲಿಸಿದ್ದಾರೆ. ಯು ಟಿ ಖಾದರ್ ನಿಮಗೆ ಮುಸಲ್ಮಾನರು ವೋಟ್ ಹಾಕಿದ್ರು . ಉಳ್ಳಾಲದ ಗಲಾಭೆ ಸಂದರ್ಭದಲ್ಲಿ ಅದೆ ಮುಸಲ್ಮಾನರ ಮನೆಗೆ ಮನೆಗೆ ಪೊಲೀಸರನ್ನ ಕಳುಹಿಸಿದ್ರಿ .ಇದೀಗ ಕೊಣಾಜೆ ಚಲೋ ಮಾಡುತ್ತಿದ್ದೇವೆ . ಇದಕ್ಕಿಂತ ಬಲಿಷ್ಠವಾದ ಹೋರಾಟ ಮಾಡುವಂತೆ ಪ್ರೇರೇಪಿಸಬೇಡಿ . ನಮ್ಮ ಔದರ್ಯದಿಂದ ನೀವು ಅಧಿಕಾರದಲಿದ್ದೀರ. ಹರೀಶ್ ಪೂಂಜ ಹೇಳಿಕೆ ನೀಡಿದ್ದಾನೆ ಮುಸಲ್ಮಾನರ ಮಸೀದಿಗಳಲ್ಲಿ ಆಯುಧ ಇದೆ ಎಂದು. ಉದ್ರೇಕಿಸುವ ಹೇಳಿಕೆ ನೀಡಿದ ಹರೀಶ್ ಪೂಂಜನ ಮೇಲೆ ಕೇಸು ದಾಖಲಿಸುವ ತಾಕತ್ ಕಮಿಷನರಿಗೆ ಇದಿಯಾ? ಮಸೀದಿಗಳಲ್ಲಿ ಆಯುಧ ಇದ್ದಿದ್ರೆ ಬಾಬರಿ ಮಸೀದಿ ಉರುಳುತ್ತಿರಲಿಲ್ಲ. ಮಳಲಿ ಮಸೀದಿ ಬಳಿ ಶರಣ್ ಪಂಪವೆಲ್ ಬರುತ್ತಿರಲಿಲ್ಲ . ಇದೆ ರೀತಿ ಮುಸಲ್ಮಾನರ ಬಂಧನ ಮುಂದುವರೆದರೆ. ಕಮಿಷನರ್ ಕಚೇರಿ ಗೇಟ್ ಒಳಗೂ ಹೋಗದಂತೆ ನಾವು ಮಂಗಳೂರನ್ನ ಸ್ತಬ್ದಗೊಳಿಸುತ್ತೇವೆ.
ಮಂಗಳೂರು ಕಮಿಷನರ್ ಬದಲು ಎಸಿಪಿ ಧನ್ಯಾ ನಾಯಕ್ ಆಗಮಿಸಿ , ಎಸ್ ಡಿಪಿಐ ಮುಖಂಡರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬೆನ್ನಲ್ಲೇ ಎಸ್ ಡಿಪಿಐ ಮುಖಂಡರು ಪ್ರತಿಭಟನೆ ಕೈಬಿಟ್ಟರು. ಎಸ್ ಡಿಪಿಐ ಮುಖಂಡರುಗಳಾದ ಅಥಾವುಲ್ಲ ಜೋಕಟ್ಟೆ, ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮುಂತಾದವರು ಉಪಸ್ಥಿತರಿದ್ದರು.