ಉಳ್ಳಾಲ, , ಜೂ. 18(DaijiworldNews/AK): ರಾಜ್ಯದಲ್ಲಿ ಕನ್ನಡ ಮಾತನಾಡಲು ಬಾರದ ಸಚಿವರನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳು ಯಾವ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಮೊದಲಿಗೆ ಶೇ.50 ರಷ್ಟು ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸಿ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಹೇಳಿದರು.
ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಕೊರಗಜ್ಜನ ಆಶೀರ್ವಾದ ಪಡೆಯಲು ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ನಂತರ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಕೊರಗಜ್ಜನಲ್ಲಿ ಹರಕೆ ಮಾಡಿದ್ದು, ಅದನ್ನು ಆತ ಈಡೇರಿಸಿದ ಹಿನ್ನೆಲೆಯಲ್ಲಿ ಇದೀಗ ಆಶೀರ್ವಾದ ಪಡೆದು ಸೇವೆ ನಡೆಸಲು ಬಂದಿದ್ದೇನೆ.
ಜಾಗಕ್ಕೆ ಬಹಳಷ್ಟು ಮಹಿಮೆಯಿದೆ, ಫಲಾಪೇಕ್ಷೆಯಿಲ್ಲದೆ ಜನರನ್ನು ಕಾಪಾಡುತ್ತಾ ಬಂದಿದ್ದಾನೆ. ತನಗೂ ವಿಶೇಷವಾಗಿ ಒಳ್ಳೆಯದನ್ನೇ ಮಾಡಿದ್ದು, ಗೆದ್ದ ನಂತರ ಸಾನಿಧ್ಯಕ್ಕೆ ಭೇಟಿ ಕೊಟ್ಟಿರುವೆ.
ಆಕ್ಟ್ ಸಕ್ಯು ೯ಲರ್ ನಡುವೆ ಐಎಎಸ್ ಅಧಿಕಾರಿಗಳಿಂದ ಗೊಂದಲ :
ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮವಾದ ಫಲಿತಾಂಶದೊಂದಿಗೆ ಅಭೂತಪೂರ್ವ ಜಯಗಳಿಸಲು ಶಿಕ್ಷಕರೇ ಕಾರಣರಾಗಿರುತ್ತಾರೆ. ತನ್ನ ಜಯವನ್ನು ಶಿಕ್ಷಕರ ಸಮುದಾಯಕ್ಕೆ ಅರ್ಪಿಸುತ್ತೇನೆ. ಶಿಕ್ಷಕರಿಗೆ ಅನೇಕ ಜ್ವಲಂತ ಸಮಸ್ಯೆಗಳಿವೆ ಹಿಂದಿನಿಂದಲೂ ಇದ್ದು, ಈ ಸಾಲಿನಲ್ಲಿಯೂ ಶಿಕ್ಷಕರ ಸಮಸ್ಯೆಗಳನ್ನು ಒತ್ತು ಕೊಟ್ಟು ಕೆಲಸ ಮಾಡುತ್ತೇನೆ.
ಅದಕ್ಕೆ ಸರ್ವಶಕ್ತ ಕೊರಗಜ್ಜ ಶಕ್ತಿಯನ್ನು ಕೊಡಲಿ. ನ್ಯಾಯಯುತವಾಗಿ ಶಿಕ್ಷಕರಿಗೆ ನೀಡಬೇಕಾದ ಹಾಗೂ ಸರಕಾರ ಮಾಡಬೇಕಾದ ಅನೇಕ ಕೆಲಸಗಳಿವೆ. ಹಲವು ಸಮಸ್ಯೆಗಳಿಂದ ವಂಚಿತರಾಗಿದ್ದಾರೆ . ಸರಕಾರಕ್ಕೆ ಗೊತ್ತಿಲ್ಲದೆಯೋ, ಗೊತ್ತಿದ್ದೋ, ಅಧಿಕಾರಿಗಳ ವ್ಯತಿರಿಕ್ತ ನಿಯಮಾವಳಿಗಳು ಶಿಕ್ಷಕರನ್ನು ಅಡಕತ್ತರಿಯಲ್ಲಿರಿಸಿದೆ., ಸಕ್ಯು ೯ಲರ್ ಗಳನ್ನು ಆಕ್ಟ್ ಗಳ ರೀತಿಯಲ್ಲಿ ಮಾಡಲಾಗುತ್ತಿದೆ. ಸಕ್ಯು೯ಲರ್ ಗೆ ಬೇರೆಯೇ ಗೌರವವಿದೆ. ಆಕ್ಟ್ ಗಳಿಗೆ ಅದರದ್ದೇ ಆದ ಗೌರವವಿದೆ. ಸಕ್ಯು ೯ಲರ್ ಮೂಲಕ ಆಕ್ಟ್ ಗಳನ್ನು ಬಳಸುವಂತಹ ಕಾರ್ಯಗಳಿಗೆ ಐಎಎಸ್ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ ಎಂದರು.
ಮಂತ್ರಿಗಳು ಕೂಡ ಗಂಭೀರವಾಗಿ ಪರಿಗಣಿಸಿ ಆಕ್ಟ್ ಗಳ ಮೂಲಕ ಬಂದಂತಹ ವಿಚಾರಗಳನ್ನು ಸಕ್ಯು ೯ಲರ್ ಗಳ ಮೂಲಕ ಪ್ರಯೋಗ ಮಾಡಿ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ತೊಂದರೆಯುಂಟು ಮಾಡಿದ್ದಾರೆ. ಈ ಕುರಿತು ಅನೇಕ ಬಾರಿ ವಿಧಾನಸಭೆಯಲ್ಲಿ ಚರ್ಚೆಯನ್ನೂ ಮಾಡಿದ್ದೇನೆ. ಮುಂದೆಯೂ ಸಕ್ಯು ೯ಲರ್ ಹಾಗೂ ಆಕ್ಟ್ ಗಳಿಗೆ ಇರುವ ಮಹತ್ವ ಏನು ಎಂಬುದನ್ನು ಶಿಕ್ಷಕರ ಧ್ವನಿಯಾಗಿ ಸರಕಾರದ ಕಣ್ಣು ತೆರೆಯುವ ಕೆಲಸ ಮಾಡುತ್ತೇನೆ ಎಮದು ಹೇಳಿದರು.
ಶಿಕ್ಷಣ ಉಳ್ಳವರ ಪಾಲು :
ಶಿಕ್ಷಣ ಮತ್ತು ಆರೋಗ್ಯ ನಾಡಿನ ಸಂವಿಧಾನ ಬದ್ಧ ಹಕ್ಕು , ಕೇಳಿ ಪಡೆಯಬೇಕೆಂದೇನಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಅಗತ್ಯ ಪೂರೈಸಬೇಕಿದೆ. ಆದರೆ ಇಂದು ಶಿಕ್ಷಣ ಇಂದು ಉಳ್ಳವರ ಪಾಲಾಗಿದೆ. ಶಿಕ್ಷಣ ಕ್ರಾಂತಿಯಿಂದಲೇ ಎಲ್ಲಾ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ತನ್ನ ಕಾಲ ಮೇಲೆ ತಾನೇ ನಿಂತು, ನಾಡಿಗೆ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವುದು ಶಿಕ್ಷಣದಿಂದಲೇ.ಅಂತಹ ಜೀವನ ಮೌಲ್ಯಗಳನ್ನು ಕಾಪಾಡುವಂತಹ ಗುಣಮಟ್ಟದ ಶಿಕ್ಷಣವನ್ನು ಕೊಡುವ ಕೆಲಸ ಸರಕಾರದಿಂದ ಆಗಬೇಕಿದೆ ಎಂದು ನುಡಿದರು.
ಶಿಕ್ಷಣ ಸಚಿವರಿಗೇ ಕನ್ನಡ ಮಾತನಾಡಲು ಬರುವುದಿಲ್ಲ:
ಶಿಕ್ಷಣ ಸಚಿವರೇ ತನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳುತ್ತಾರೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ ಇರುವಂತಹ ರಾಜ್ಯದಲ್ಲಿ ಇದು ಅಪಹಾಸ್ಯಕರ ವಿಚಾರವಾಗಿದೆ. ಒಂದು ಕಡೆಯಲ್ಲಿ ಮುಖ್ಯಮಂತ್ರಿಗಳು ಕನ್ನಡ ವನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕು ಅನ್ನುತ್ತಾರೆ. ಕನ್ನಡಕ್ಕೆ ಈ ಹಿಂದೆ ಹಿರಿಯರು ಕೊಟ್ಟಂತಹ ಪ್ರಾಧಾನ್ಯತೆಯನ್ನು ಮುಂದೆಯೂ ಮುಂದುವರಿಸಿ ಕನ್ನಡದ ಗೌರವ ಹೆಚ್ಚು ಮಾಡುವ ಕೆಲಸ ಮಾಡಬೇಕಿದೆ. ಕನ್ನಡ ಬಾರದೇ ಇರುವ ಸಚಿವರ ಹಿಡಿದುಕೊಂಡು ಕನ್ನಡ ಆಡಳಿತ ಭಾಷೆಯನ್ನಾಗಿ ಮುಖ್ಯಮಂತ್ರಿಗಳು ಹೇಗೆ ಮಾಡುತ್ತಾರೆ ಎಂಬುದೇ ಯಕ್ಷಪ್ರಶ್ನೆ ಎಂದರು.
ಹಳ್ಳಿಗಾಡಿನ ಮಕ್ಕಳು, ವಿಶೇಷವಾಗಿ ಹೆಣ್ಮಕ್ಕಳು ಶಿಕ್ಷಣ ಪಡೆಯಲಿ ಎಂದು ಅನೇಕ ಹಿರಿಯರು ಸಂಸ್ಥೆಗಳನ್ನು ಸ್ಥಾಪಿಸಿದರು. ಅದರಲ್ಲಿ ಕೆಲವು ಅನುದಾನಿತ ಇನ್ನು ಹಲವು ಅನುದಾನರಹಿತ ಸಂಸ್ಥೆಗಳು ಮುಚ್ಚುವ ಹಂತಕ್ಕೆ ತಲುಪಿದೆ. ಗುಣಮಟ್ಟದ ಶಿಕ್ಷಣ ಕುರಿತು ಮಾತನಾಡುವ ಸರಕಾರ ಖಾಲಿಯಿರುವ ಹುದ್ದೆಗಳನ್ನು ಮೊದಲಿಗೆ ಭಡ್ತಿ ಮಾಡಬೇಕಿದೆ. ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಶೇ.50 ಶಿಕ್ಷಕರೇ ಇಲ್ಲ. ವಿಷಯಗಳಿಗೆ ಅನುಕೂಲಕರವಾಗಿ ಶಿಕ್ಷಕರಿಲ್ಲದೇ ಇದ್ದರೂ ಇರುವ ಶಿಕ್ಷಕರು ಶ್ರಮವಹಿಸಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದಲ್ಲಿ ಪೂರ್ಣಪ್ರಮಾಣದ ಶಿಕ್ಷಕರನ್ನು ನೀಡಿ. ಉತ್ತಮ ಶೌಚಾಲಯ, ಕಟ್ಟಡ, ಕ್ರೀಡಾಂಗಣಗಳನ್ನು ಮೊದಲಿಗೆ ನೀಡಿ ಎಂದರು.
ಪಿಯುಸಿ ಪಠ್ಯಪುಸ್ತಕ ಇನ್ನೂ ಲಭ್ಯವಿಲ್ಲ:
ಮೊದಲ ಪಿಯುಸಿ ಆರಂಭವಾಗಿ ಹಲವು ದಿನಗಳೇ ಕಳೆದರೂ ಇನ್ನೂ ಪಠ್ಯಪುಸ್ತಕ ನೀಡಿಲ್ಲ. ಇನ್ನು ಪೂರ್ಣಪ್ರಮಾಣದ ಪಠ್ಯ ಪುಸ್ತಕಗಳೇ ಇಲ್ಲ. ಸರಕಾರಿ ಹಾಗೂ ಅನುದಾನಿತ ಶಾಲೆಗಳನ್ನು ತಾರತಮ್ಯ ಭಾವನೆಯಿಂದ ನೋಡಲಾಗುತ್ತಿದೆ. ಎಲ್ಲಾ ಮಕ್ಕಳಿಗ ಒಂದೇ ರೀತಿಯ ಶಿಕ್ಷಣ ಕೊಡಿ. ಶಿಕ್ಷಕರಿಗೂ ಒಂದೇ ರೀತಿಯ ತರಬೇತಿಯನ್ನು ಕೊಡಿ, ಅನುದಾನಿತ ಶಾಲೆಗಳಲ್ಲಿಯೂ ಉತ್ತಮ ಅಧಿಕಾರಿಗಳಿದ್ದಾರೆ. ಶಿಕ್ಷ ಮತ್ತು ಆರೋಗ್ಯ ಎಂಬುದು ಪವಿತ್ರವಾದ ಕಾರ್ಯ ಅದರಲ್ಲಿ ಆಟವಾಡದಿರಿ ಎಂದರು.
ಈ ಸಂದರ್ಭ ಬೋಜೇಗೌಡರನ್ನು ಕೊರಗಜ್ಜ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ದ.ಕ ಜಿಲ್ಲಾ ಯುವಜನತಾದಳ ಅಧ್ಯಕ್ಷ ಅಶ್ವಿತ್ ಸುವರ್ಣ,
ಕೊರಗಜ್ಜ ಸೇವಾ ಸಮಿತಿ ಟ್ರಸ್ಟೀ ದೇವಿಪ್ರಸಾದ್ ಶೆಟ್ಟಿ, ದ.ಕ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಹಾಗೂ ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಪ್ರಾಂಶುಪಾಲ ವಿಠಲ್ ಅಬುರ, ಬದ್ರಿಯಾ ಪದವಿಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಇಸ್ಮಾಯಿಲ್ ಉಪಸ್ಥಿತರಿದ್ದರು.